ರಾಜ್ಯ

ಕೆಜಿಎಫ್ ನಲ್ಲಿ ನೀರಿಗಾಗಿ ಕಿತ್ತಾಟ: ಕಿವಿ ಕಳೆದುಕೊಂಡ ಮಹಿಳೆ!

Shilpa D
ಕೆಜಿಎಫ್: ನೀರಿನ ವಿಚಾರದಲ್ಲಿ ಮಹಿಳೆಯರ ನಡುವೆ ಆರಂಭವಾದ ಜಗಳ ಕಿವಿ ಕತ್ತರಿಸುವ ಮಟ್ಟಕ್ಕೆ ಹೋಗಿ ಮಹಿಳೆಯೊಬ್ಬರು ತಮ್ಮ ಕಿವಿಯ ಭಾಗವನ್ನು ಕಳೆದುಕೊಂಡಿರುವ ಘಟನೆ ಎನ್ ಜಿ ಹುಲುಕುರ್ ಪಂಚಾಯಿತಿ ವ್ಯಾಪ್ತಿಯ ಕದಿರಿಕನ ಕುಪ್ಪ ಎಂಬ ಗ್ರಾಮದಲ್ಲಿ ನಡೆದಿದೆ.
ಮೇ 9 ರಂದು ಘಟನೆ ನಡೆದಿದ್ದು, ಪ್ರಕರಣ ನಿಧಾನವಾಗಿ ಬೆಳಕಿಗೆ ಬಂದಿದೆ. ಯಶೋದಮ್ಮ ಮತ್ತು ಇಂದ್ರಾಣಿ ನಡುವೆ ಜಗಳ ನಡೆದಿದೆ, ಹೊಸರಾಯಪ್ಪ, ಇಂದ್ರಾಣಿ, ಶಶಿ, ಸಂತೋಷ ಮತ್ತಿತರರು ತನ್ನ ಕಿವಿ ಕತ್ತರಿಸಿದ್ದಾರೆ ಎಂದು ಯಶೋದಮ್ಮ ಆರೋಪಿಸಿದ್ದಾರೆ. ಬೇತಮಂಗಲ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
SCROLL FOR NEXT