ಸಂಗ್ರಹ ಚಿತ್ರ 
ರಾಜ್ಯ

ಕರ್ನಾಟಕ ಪೊಲೀಸ್ 'ಟೋಪಿ' ಮೇಲೆ ಲಖನೌ ಪೊಲೀಸರ ಕಣ್ಣು!

ಬಿಸಿಲಿನ ಜಳಕ್ಕೆ ಕಂಗಾಲಾಗಿರುವ ಉತ್ತರ ಪ್ರದೇಶದ ಲಖನೌ ಟ್ರಾಫಿಕ್ ಪೊಲೀಸರು ಇದೀಗ ಕರ್ನಾಟಕ ಪೊಲೀಸ್ ಟೋಪಿ ಮೇಲೆ ಕಣ್ಣಾಕಿದ್ದಾರೆ.

ಬೆಂಗಳೂರು: ಬಿಸಿಲಿನ ಜಳಕ್ಕೆ ಕಂಗಾಲಾಗಿರುವ ಉತ್ತರ ಪ್ರದೇಶದ ಲಖನೌ ಟ್ರಾಫಿಕ್ ಪೊಲೀಸರು ಇದೀಗ ಕರ್ನಾಟಕ ಪೊಲೀಸ್ ಟೋಪಿ ಮೇಲೆ ಕಣ್ಣಾಕಿದ್ದಾರೆ.
ನಮ್ಮ ಕರ್ನಾಟಕ ಪೊಲೀಸರು ಕವ್ ಬಾಯ್ ಟೋಪಿಯನ್ನು ಬಳಸುತ್ತಿದ್ದಾರೆ. ಲಘು ತೂಕದ, ಗಾಳಿಯಾಡುವ ಮತ್ತು ಆರಾಮದಾಯಕವಾಗಿದ್ದು ಈ ರೀತಿಯ ಟೋಪಿಗಳನ್ನು ತಾವು ಬಳಸಲು ಲಖನೌ ಪೊಲೀಸರು ಮುಂದಾಗಿದ್ದಾರೆ.
ಸದ್ಯ ಲಖನೌ ಟ್ರಾಫಿಕ್ ಪೊಲೀಸರು ವುಲನ್ ಟೋಪಿಯನ್ನು ಬಳಸುತ್ತಿದ್ದು ಅದು ಬಿಸಿಲನ್ನು ತಡೆಯುತ್ತಿಲ್ಲ. ಹೀಗಾಗಿ ನಮ್ಮ ಸಿಬ್ಬಂದಿಗಳು ಹೈರಾಣಾಗಿದ್ದಾರೆ. ಅಲ್ಲದೆ ಈ ಟೋಪಿಗಳನ್ನು ಬದಲಿಸುವಂತೆ ಮನವಿ ಮಾಡಿದ್ದಾರೆ. ಇದರಿಂದಾಗಿ ನಾವು ಕರ್ನಾಟಕ ಟ್ರಾಫಿಕ್ ಪೋಲೀಸರು ಬಳಸುವ ಟೋಪಿಯನ್ನು ಬಳಸಲು ನಿರ್ಧರಿಸಿದ್ದೇವೆ ಎಂದು ಲಖನೌ ಹೆಚ್ಚುವರಿ ಆಯುಕ್ತ ಪುರ್ನೆಂದು ಸಿಂಗ್ ತಿಳಿಸಿದ್ದಾರೆ.
ನಮ್ಮ ಸಿಬ್ಬಂದಿಗಳು ಸಾಮಾಜಿಕ ಜಾಲತಾಣದಲ್ಲಿ ಇತರ ರಾಜ್ಯದ ಟ್ರಾಫಿಕ್ ಪೊಲೀಸರು ಬಳಸುವ ಟೋಫಿಗಳನ್ನು ನೋಡಿದ್ದಾರೆ. ಆಗ ಅವರಿಗೆ ಕರ್ನಾಟಕ ಪೊಲೀಸರು ಬಳಸುತ್ತಿರುವ ಟೋಪಿಗಳು ತಮ್ಮ ಉಡುಪಿಗೂ ಹೊಂದುತ್ತದೆ ಹಾಗೂ ಅವು ಹೆಚ್ಚು ಆರಾಮಾದಾಯವಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ನಾವು ಸಮಿತಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಇನ್ನು ಒಂದು ತಿಂಗಳೊಳಗೆ ಅದಕ್ಕೆ ಅನುಮೋದನೆ ಸಿಗುವ ಭರವಸೆ ಇದೆ ಎಂದು ಸಿಂಗ್ ಹೇಳಿದರು.
ಬೆಂಗಳೂರಿನಲ್ಲಿನ ಅಂಗಡಿಯೊಂದಕ್ಕೆ 50 ಬಿಳಿಯ ಟೋಪಿಯನ್ನು ನೀಡುವಂತೆ ಸೂಚಿಸಿದ್ದೇವೆ. ನಮಗೆ ಅನುಮೋದನೆ ಸಿಕ್ಕ ಕೂಡಲೇ ಕರ್ನಾಟಕ ಟೋಪಿಯನ್ನು ಬಳಸುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT