ರಾಜ್ಯ

ಗಂಗಮ್ಮ ದೇವಿ ವಿಷ ಪ್ರಸಾದ ಪ್ರಕರಣ: ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Raghavendra Adiga
ಚಿಂತಾಮಣಿ: ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ನರಸಿಂಹಪೇಟೆಯಲ್ಲಿರುವ ಗಂಗಮ್ಮ ದೇವಿ ದೇವಾಲಯ ವಿಷ ಪ್ರಸಾದ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ವರು ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ದಾಖಲಾಗಿದೆ.
ಚಿಂತಾಮಣಿ ನಗರದ ನರಸಿಂಹಪೇಟೆಯಲ್ಲಿರುವ ಗಂಗಮ್ಮ ದೇವಿದೇವಸ್ಥಾನದ ವಿಷ ಪ್ರಸಾದ ಪ್ರಕರಣದ ಸಂಬಂಧ ಗುರುವಾರ ಪೋಲೀಸರು ದೊಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಘಟನೆಗೆ ಸಂಬಂಧ ನಾಲವರನ್ನು ಬಂಧಿಸಲಾಗಿದ್ದು ಲಕ್ಷ್ಮೀ ಹಾಗೂ ಲೋಕೇಶ್ ನಡುವಿನ ಅಕ್ರಮ ಸಂಬಂಧವೇ ಇದಕ್ಕೆ ಮೂಲ ಕಾರಣವೆನ್ನುವುದು ತನಿಖೆಯಿಂದ ಬಹಿರಂಗಗೊಂಡಿತ್ತು. ಈ ಕುರಿತಂತೆ ಸಮಗ್ರ ತನಿಖೆ ನಡೆಸಿರುವ ಚಿಂತಾಮಣಿ ಡಿವೈಎಸ್​ಪಿ ಶ್ರೀನಿವಾಸ್‌ ನಾಲ್ವರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. 
ಜನವರಿ 25ರಂದು ನಡೆದ ಘಟನೆಯಲ್ಲಿ ದೇವಾ;ಲಯದ ಪ್ರಸಾದ ಸೇವಿಸಿದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರೆ ಇನ್ನೂ ಎಂಟು ಮಂದಿ ಅಸ್ವಸ್ಥರಾಗಿದ್ದರು.ಘಟನೆ ಸಂಬಂಧ ಆರೋಪಿಗಳಾದ  ಲಕ್ಷ್ಮೀ, ಲೋಕೇಶ್ ಪಾರ್ವತಮ್ಮ, ಅಮರಾವತಿ  ಎಂಬುವವರನ್ನು ಬಂಧಿಸಲಾಗಿದೆ.ಇದರಲ್ಲಿ ಲಕ್ಷ್ಮಿ ಪ್ರಮುಖ ಆರೊಪಿಯಾಗಿದ್ದು ಈಕೆಗೆ ಉಳಿದ ಮೂವರು ಸಹಕರ ನೀಡಿದ್ದರೆನ್ನಲಾಗಿದೆ.
SCROLL FOR NEXT