ರಾಜ್ಯ

ಬಿಬಿಎಂಪಿ ಉಪ ಚುನಾವಣೆ: ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿ

Lingaraj Badiger
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಸಗಾಯಪುರಂ ಹಾಗೂ ಕಾವೇರಿಪುರ ವಾರ್ಡ್ ಗಳ ಉಪ ಚುನಾವಣೆಗೆ ನಾಮಪತ್ರ ಪರಿಶೀಲನೆ ಪೂರ್ಣಗೊಂಡಿದ್ದು, ಎರಡೂ ವಾರ್ಡ್ ಗಳಿಂದ ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾವೇರಿಪುರ ವಾರ್ಡ್ ನ ಪಲ್ಲವಿ .ಸಿ, ಸುಶೀಲ. ಎನ್, ಕಮಲಮ್ಮ ಹಾಗೂ ತೇಜಸ್ವಿನಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಸಗಾಯಪುರಂ ವಾರ್ಡ್ ನಿಂದ ಇರ್ಶಾದ್ ಅಹ್ಮದ್, ಕೆ.ಏಳುಮಲೈ, ಸೆಲ್ವಿ.ಪಿ, ಮಾರಿ ಮುತ್ತು, ಜಿ.ನಟರಾಜ್, ಪಳನಿ ಅಮ್ಯಾಳ್. ವಿ, ಫಿಲಿಪ್ಸ್ ಸ್ಟೀಫನ್, ಪಳನಿ, ಪುರುಷೋತ್ತಮ್, ಮುಜ್ಯಮಿಲ್‍ ಪಾಷಾ, ಸೈಯದ್ ಮಸೂದ್, ಎಸ್. ಸರವಣನ್, ಎ.ಜೇಯೆರೀಮ್, ಮೋದಿ ಸೈಫುಲ್ಲಾ ಕಣದಲ್ಲಿದ್ದಾರೆ.
ಉಮೇದುವಾರಿಕೆ ಹಿಂಪಡೆಯಲು  ಮೇ 20ರಂದು ಕೊನೆಯ ದಿನಾಂಕವಾಗಿರುತ್ತದೆ. ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ.
2018 ರ ಅಕ್ಟೋಬರ್ 5ರಂದು ಕಾವೇರಿಪುರದ ಕಾರ್ಪೊರೇಟರ್ ರಮಿಲಾ ಉಮಾಶಂಕರ್ ಹೃದಯಾಘಾತದಿಂದ ಹಾಗೂ ಸಗಾಯಿಪುರದ ಕಾರ್ಪೊರೇಟರ್ ಏಳು ಮಲೈ ಅವರು 2018ರ ಡಿಸೆಂಬರ್ 6ರಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಎರಡೂ ವಾರ್ಡ್ ಗಳಿಗೆ ಮರು ಮತದಾನ ನಡೆಯುತ್ತಿದೆ.
SCROLL FOR NEXT