ರಾಜ್ಯ

ಬೆಳಗಾವಿ: ಕುಡಿಯುವ ನೀರಿಗಾಗಿ ಅಥಣಿ ಬಂದ್, ಬೆಳಗಿನಿಂದಲೇ ಬಸ್ ಸಂಚಾರವಿಲ್ಲ

Raghavendra Adiga
ಬೆಳಗಾವಿ: ಕೃಷ್ಣಾ ನದಿಗೆ ನೀರು ಹರಿಸುವುದಕ್ಕೆ ರಾಜ್ಯ ಸರ್ಕಾರ ವಿಫಲವಾಗಿದೆ, ನಮ್ಮಲ್ಲಿ ಕುಡಿಯುವುದಕ್ಕೆ ಶುದ್ದವಾದ ನಿರೂ ದೊರೆಯುತ್ತಿಲ್ಲ, ಸರ್ಕಾರ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲೆ  ಅಥಣಿ ಪಟ್ಟಣದಲ್ಲಿ ಇಂದು (ಸೋಮವಾರ) ಬಂದ್ ಆಚರಿಸಲಾಗುತ್ತಿದೆ.
ಬಂದ್ ಕಾರಣದಿಂದಾಗಿ ಬೆಳಗಿನ ಜಾವದಿಂದಲೇ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಕೃಷ್ಣಾ ನದಿ ನೀರು ಹೋರಾಟ ಸಮಿತಿ ಬಂದ್ ನಡೆಸುತ್ತಿದೆ. 
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಕೃಷ್ಣಾ ನದಿಗೆ 4 ಟಿಎಂಸಿ ನೀರು  ಇದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿದೆ.
ಬಂದ್ ಹಿನ್ನೆಲೆಯಲ್ಲಿ ಸ್ಥಳೀಯ ಸಿದ್ಧೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಲಿದ್ದು ಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಅಂಬೇಡ್ಕರ ವೃತ್ತದ ಮೂಲಕ ಫಾಸಿ ಕಟ್ಟೆವರೆಗೆ ಸಾಗಲಿದೆ ಎಂದು ಹೋರಾಟ ಸಮಿತಿಯ  ಬಸನಗೌಡಾ ಪಾಟೀಲ ಮತ್ತು ವಿಜಯಕುಮಾರ ಅಡಹಳ್ಳಿ ಹೇಳಿದ್ದಾರೆ.
ಚಿಕ್ಕೋಡಿಯಲ್ಲಿ ರಸ್ತೆ ತಡೆ
ನೀರು ಬಿಡುವಂತೆ ಆಗ್ರಹಿಸಿ ಚಿಕ್ಕೋಡಿ ತಾಲೂಕಿನಲ್ಲಿ ಸಹ ಪ್ರತಿಭಟನೆಗಳು ನಡೆಯಲಿದೆ. ಈ ವೇಳೆ ವಿವಿಧ ಸಂಘಟನೆಗಳು ರಸ್ತೆ ತಡೆ ನಡೆಸುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಮೂಲಗಳು ಹೇಳಿದೆ.
SCROLL FOR NEXT