ರಾಜ್ಯ

ಮೆಟ್ರೋ ಕಾಮಗಾರಿ ವೇಳೆ ಅವಘಡ: 81 ವರ್ಷದ ವ್ಯಕ್ತಿ ಸ್ಥಿತಿ ಗಂಭೀರ!

Srinivas Rao BV
ಬೆಂಗಳೂರು: ಮೆಟ್ರೋ ಕಾಮಗಾರಿ ವೇಳೆ ಅವಘಡ ಸಂಭವಿಸಿದ್ದು, 81 ವರ್ಷದ ವಯೋ ವೃದ್ಧ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. 
ರೀಚ್-5 ವ್ಯಾಪ್ತಿಗೆ ಬರುವ  ಸಿಲ್ಕ್ ಬೋರ್ಡ್ ಹಾಗೂ ಆರ್ ವಿ ರೋಡ್ ಪ್ರದೇಶದಲ್ಲಿ ಫಲಕಗಳ ಡೀಶಟರಿಂಗ್ ಕಾಮಗಾರಿ ನಡೆಯುತ್ತಿತ್ತು, ಈ ವೇಳೆ ಪ್ಯಾನಲ್ ಗಳನ್ನು ಹೊತ್ತಿದ್ದ ಕ್ರೇನ್ ಜರ್ಕ್ ನಿಂದಾಗಿ ಪ್ಯಾನಲ್ ಗಳು ಬ್ಯಾರಿಕೇಡ್ ಗೆ ತಗುಲಿದೆ. ಇದರಿಂದಾಗಿ ಚಲಿಸುತ್ತಿದ್ದ ಆಟೋ ಅಪಘಾತಕ್ಕೀಡಾಗಿದ್ದು, ಆಟೋದಲ್ಲಿ ಸಂಚರಿಸುತ್ತಿದ್ದ 81 ವರ್ಷದ ವೃದ್ಧ ವ್ಯಕ್ತಿ ತಲೆಗೆ ತೀವ್ರವಾದ ಗಾಯವಾಗಿದೆ. 
ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ವೃದ್ಧ ವ್ಯಕ್ತಿಯನ್ನು ದಾಖಲಿಸಲಾಗಿತ್ತು. ಅಲ್ಲಿಂದ ಅಪೋಲೋ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು. ಇತ್ತೀಚಿನ ವರದಿ ಪ್ರಕಾರ, ಅವರನ್ನು ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳು ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 
SCROLL FOR NEXT