ರಾಜ್ಯ

ಎತ್ತಿನಹೊಳೆಗೆ ಹಸಿರು ನ್ಯಾಯಪೀಠ ಸಮ್ಮತಿ, ಪಶ್ಚಿಮ ಘಟ್ಟ ನಾಶಕ್ಕೆ ಮುನ್ಸೂಚನೆ ಎಂದ ಪರಿಸರವಾದಿಗಳು

Raghavendra Adiga
ಮಂಗಳೂರು:  ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಿಗೆ ನೀರಿನ ಸೌಕರ್ಯ ಕಲ್ಪಿಸುವ ಮಹತ್ವದ ಎತ್ತಿನಹೊಳೆ  ಕುಡಿಯುವ ನೀರಿನ ಯೋಜನೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಷರತ್ತುಬದ್ದ ಅನುಮೋದನೆ ನೀಡಿದೆ. ಅಲ್ಲದೆ ಪರಿಸರವಾದಿಗಳು ಯೋಜನೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಶುಕ್ರವಾರ ಹಸಿರು ನ್ಯಾಯಪೀಠ ಈ ತೀರ್ಪು ನೀಡಿದ್ದು ಯೋಜನೆಯಿಂದಾಗಿ ಪಶ್ಚಿಮ ಘಟ್ಟಗಳಿಗೆ ಹಾನಿ ಉಂಟಾಗಲಿದೆ ಎಂದು ವಾದಿಸಿದ್ದ ಪರಿಸರವಾದಿಗಳಿಗೆ ಇದರಿಂದ ಭಾರೀ ಹಿನ್ನೆಡೆಯಾಗಿದೆ.
ಎನ್ಜಿಟಿಯು ತನ್ನ ತೀರ್ಪಿನ ಆಧಾರದ ಮೇಲೆ ಯೋಜನೆಯನ್ನು ಕುಡಿಯುವ ನೀರಿಗಾಗಿ ನಿರ್ಮಿಸುವುದಾದರೆ ಅದಕ್ಕೆ ಪರಿಸರ ನ್ಯಾಯಾಲಯದ ಅನುಮತಿಯ ಅಗತ್ಯವಿಲ್ಲ ಎಂದಿದೆ.ಹಾಗಿದ್ದರೂ ಟ್ರಿಬ್ಯೂನಲ್ ಯೋಜನೆಯ ಮೇಲ್ವಿಚಾರಣೆಗಾಗಿ ಅರಣ್ಯ ಇಲಾಖೆ ಮತ್ತು ಎಂಒಇಎಫ್ ಗೆ  ನಿರ್ದೇಶನ ನೀಡಿದ್ದು ಇಲಾಖೆಗಳು ಯೋಜನೆಯಲ್ಲಿ ಯಾವುದೇ ನಿಯಮ ಉಲ್ಲಂಘನೆಯನ್ನು ಕಂಡುಕೊಂಡಲ್ಲಿ ಅಂತಹಾ ವೇಳೆ ಸೂಕ್ತ ಕ್ರಮ ತೆಗೆದುಕೊಳ್ಳಲು ಅವರು ಸ್ವತಂತ್ರರಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಯೋಜನೆಯನ್ನು ಪ್ರಗತಿಯಲ್ಲಿರುವಾಗ ಯಾವುದೇ ಹೆಚ್ಚಿನ ಅದ್ಯಯನ ನಡೆಯಬೇಕು,  ಪಶ್ಚಿಮ ಘಟ್ಟಗಳ ಮೇಲೆ ಅದರ ಪ್ರಭಾವದ ಹಿನ್ನೆಲೆಯಲ್ಲಿ ಪರಿಸರದ ರಕ್ಷಣೆಗೆ ಸಂಬಂಧಿಸಿ ಸೂಕ್ತ ರೀತಿಯ ಅನುಷ್ಟಾನ ಮಾಡಲು ಅವರು ಸ್ವತಂತ್ರರಿದ್ದಾರೆ.
ಎತ್ತಿನಹೊಳೆ ಯೋಜನೆಗಾಗಿ ಈ ಹಿಂದೆ ಸಹ ಎನ್ಜಿಟಿ ಗೆ ಹಲವು ಅರ್ಜಿಗಳು ಬಂದಿದ್ದು ಇದರಲ್ಲಿ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡಿದ್ದವು.ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ , ತುಮಕುರು ಮತ್ತು ಇತರ ಜಿಲ್ಲೆಗಳ ಅಗತ್ಯಗಳನ್ನು ಪೂರೈಸಲು ನೇತ್ರಾವತಿ ನದಿಯ ಪ್ರಮುಖ ಉಪನದಿಯಾದ ಎತಿನಹೊಳೆಯ ಹರಿವನ್ನು ತಿರುಗಿಸಲು ಯೋಜನೆ ರೂಪಿಸಲಾಗಿದೆ. ಆದರೆ ಪರಿಸರವಾದಿಗಳು ಇದು ಪರಿಸರಕ್ಕೆ ಹಾನಿಯಾಗಲಿದೆ ಎಂದು ವಾದಿಸಿದ್ದಲ್ಲದೆ ನೈಜ ಕಾರಣದಲ್ಲಿ ಇದು ಕುಡಿಯುವ ನೀರಿನ ಯೋಜನೆಯಲ್ಲ ಎಂದಿದು ಪ್ರತಿಪಾದಿಸಿದ್ದಾರೆ.
SCROLL FOR NEXT