ರಾಜ್ಯ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಇನ್ನು ಮುಂದೆ ನಾಲ್ಕನೇ ಶನಿವಾರವೂ ರಜೆ

Nagaraja AB

ಬೆಂಗಳೂರು: ರಾಜ್ಯಸರ್ಕಾರದ ನೌಕರರಿಗೆ ನಾಲ್ಕನೇ ಶನಿವಾರವೂ ಸಾರ್ವತ್ರಿಕ ರಜೆ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ಘೋಷಣೆ ಮಾಡಲಾಗಿದೆ. ಆದರೆ, ಕನಕ ಜಯಂತಿ, ಬಸವ ಜಯಂತಿ, ಈದ್ ಮಿಲಾದ್, ಮಹಾವೀರ ಜಯಂತಿ ಮತ್ತಿತರ  8 ಕ್ಕೂ ಅಧಿಕ ವಿವಿಧ ಜಯಂತಿ ಆಚರಣೆ ಸಂದರ್ಭದಲ್ಲಿ ಸಿಗುತ್ತಿದ್ದ ಸಾಂದರ್ಭಿಕ ರಜೆಗಳನ್ನು ರದ್ದು ಪಡಿಸಿದೆ.

 ದೀಪಾವಳಿ ಹಬ್ಬದ ನಿಮಿತ್ತ ನೀಡುವ ರಜೆಗಳಲ್ಲಿ 1ನೇ ಮತ್ತು 3 ನೇ ದಿನ ನೀಡುವ ಬದಲು 1 ನೇ ಮತ್ತು 2 ನೇ ದಿನ ನೀಡಲು ನಿರ್ಧರಿಸಲಾಗಿದೆ.

ಆರನೇ ವೇತನ ಆಯೋಗ ನೀಡಿದ್ದ ಎರಡನೇ ವರದಿಯಲ್ಲಿ ರಜೆಗಳಿಗೆ ಸಂಬಂಧಿಸಿದಂತೆ ಕೆಲವು ಶಿಫಾರಸು ಮಾಡಿತ್ತು. ಸಾಂದರ್ಭಿಕ ರಜೆ ಕಡಿತ, ಜಯಂತಿಗಳಿಗೆ ಇರುವ ರಜೆ ರದ್ದು ಸೇರಿ ಕೆಲ ಸಲಹೆಗಳನ್ನು ಆಯೋಗ ನೀಡಿತ್ತು.
ಆರನೇ ವೇತನ ಆಯೋಗದ ವರದಿಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪ ಸಮಿತಿ ವಿವಿಧ ಸಮುದಾಯ, ಸರ್ಕಾರಿ ನೌಕರರ ಸಂಘಟನೆ, ಸರ್ಕಾರಿ ಆಡಳಿತ ಕ್ಷೇತ್ರದ ತಜ್ಞರ ಜೊತೆ  ಸಮಾಲೋಚಿಸಿ ಕೆಲವನ್ನು ಶಿಫಾರಸು ಮಾಡಿತ್ತು ಎನ್ನಲಾಗಿದೆ.
ಸರ್ಕಾರಿ ನೌಕರರಿಗೆ 15 ಸಾಂದರ್ಭಿಕ ರಜೆ ಇದೆ. ಈ ಪೈಕಿ ಮೂರು ಕಡಿಮೆ ಮಾಡಲು ಶಿಫಾರಸು ಬಂದಿದೆ. ಹೀಗಾಗಿ ತಿಂಗಳಿಗೆ ಒಂದರಂತೆ ವರ್ಷ 12 ಸಾಂದರ್ಭಿಕ ರಜೆಗಳಿರುತ್ತವೆ.
SCROLL FOR NEXT