ರಾಜ್ಯ

ಎಂ.ಎಂ ಕಲ್ಬುರ್ಗಿ ಹತ್ಯೆ ಪ್ರಕರಣ: ಎಸ್ ಐ ಟಿ ವಶಕ್ಕೆ ಅಮೋಲ್ ಕಾಳೆ

Shilpa D
ಬೆಂಗಳೂರು: ವಿಚಾರವಾದಿ ಹಾಗೂ ಬರಹಗಾರ ಎಂಎಂ ಕಲಬುರಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷಾ ತನಿಖಾ ತಂಡ ಗೌರಿ ಹತ್ಯೆ ಕೇಸ್ ಆರೋಪಿ ಅಮೋಲ್ ಕಾಳೆಯನ್ನು ವಶಕ್ಕೆ ಪಡೆದುಕೊಂಡಿದೆ. 
ವಿಶೇಷ ನ್ಯಾಯಾಲಯ ಕಾಳೆಯನ್ನು 11 ದಿನಗಳ ಪೊಲಿಸ್ ಕಸ್ಟಡಿಗೆ ವಹಿಸಿದೆ. ಹಿಂದೂ ಜನಜಾಗೃತಿ ಸಮಿತಿ  ಮಾಜಿ ಸದಸ್ಯನಾಗಿರುವ ಕಾಳೆಯನ್ನು  ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ ಐಟಿ ಕಳೆದ ವರ್ಷ ಮೇ ತಿಂಗಳಲ್ಲಿ ಬಂಧಿಸಿತ್ತು. ಪುಣೆಯಲ್ಲಿರುವ ಆತನ ಮನೆಯ ಮೇಲೂ ದಾಳಿ ನಡೆಸಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿತ್ತು.
ಹಲವು ವಿಚಾರವಾದಿಗಳ ಹತ್ಯೆ ನಡೆಸಲು ತರಬೇತಿ ಮತ್ತು ಅದರ ಕಾರ್ಯಾಚರಣೆ ಬಗ್ಗೆ ಆತನ ಮನೆಯಲ್ಲಿ  ಮಾಹಿತಿ ಸಿಕ್ಕಿತ್ತು. 
ನಾಲ್ಕು ಹೈ ಪ್ರೊಫೈಲ್ ಮರ್ಡರ್ ಕೇಸ್ ಗಳಲ್ಲಿ ಕಾಳೆಗೆ ನಂಟಿರುವುದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಹತ್ಯೆಗೂ ಕಾಳೆಗೂ ಸಂಬಂಧವಿದೆ ಎಂದು ಹೇಳಲಾಗಿದೆ, ದಾಬೋಲ್ಕರ್ ಹತ್ಯೆ ಕೋರನಿಗೆ 7.65 ಎಂಎಂ ಕಂಟ್ರಿ ಪಿಸ್ತೂಲ್ ಅನ್ನು ನೀಡಿದ್ದ ಎಂದು ಸಿಬಿಐ ಅಧಿಕಾರಿಗಳು ವಿಶೇಷ ಕೋರ್ಟ್ ಗೆ ತಿಳಿಸಿದ್ದರು. 
SCROLL FOR NEXT