ಟಿಪ್ಪು ಬೇಸಿಗೆ ಅರಮನೆ 
ರಾಜ್ಯ

'ಟಿಪ್ಪು ಸುಲ್ತಾನ್ ಹೆಸರನ್ನು ಸ್ಥಳಗಳಿಂದ ಕೈಬಿಡಲಾಗುತ್ತದೆಯೇ'

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಇತಿಹಾಸವನ್ನು ಶಾಲಾ ಪಠ್ಯಪುಸ್ತಕದಿಂದ ತೆಗೆದು ಹಾಕುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ ಬೆನ್ನಲ್ಲೇ ಹಲವರ ಮನಸಲ್ಲಿ ಮತ್ತಷ್ಟು ಪ್ರಶ್ನೆಗಳೂ ಮೂಡುತ್ತಿವೆ.

ಬೆಂಗಳೂರು: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಇತಿಹಾಸವನ್ನು ಶಾಲಾ ಪಠ್ಯಪುಸ್ತಕದಿಂದ ತೆಗೆದು ಹಾಕುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ ಬೆನ್ನಲ್ಲೇ ಹಲವರ ಮನಸಲ್ಲಿ ಮತ್ತಷ್ಟು ಪ್ರಶ್ನೆಗಳೂ ಮೂಡುತ್ತಿವೆ.

ಗುರುವಾರ ಸಾಮಾಜಿಕ ಮಾಧ್ಯಮಗಳಾದ ಟ್ಲಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಈ ಸಂಬಂಧ ನೆಟ್ಟಿಗರು ಬಿಸಿಬಿಸಿ ಚರ್ಚೆ ನಡೆಸಿದ್ದಾರೆ, ಕೇವಲ ಪಠ್ಯ ಪುಸ್ತಕದಿಂದ ಮಾತ್ರ ಟಿಪ್ಪು ಔಟ್ ಆಗುತ್ತದೆಯೋ ಅಥವಾ ಟಿಪ್ಪು ಹೆಸರಿರುವ ಟಿಪ್ಪು ಬೇಸಿಗೆ ಅರಮನೆ ಮತ್ತು ಟಿಪ್ಪು ಎಕ್ಸ್ ಪ್ರೆಸ್ ಟ್ರೈನ್ ಹೆಸರನ್ನು ಬದಲಿಸುತ್ತಿರಾ ಎಂದು ಸಿಎಂ ಯಡಿಯೂರಪ್ಪ ಅವರಿಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ.

ನಂದೆ ಬೆಟ್ಟದಲ್ಲಿರುವ ಟಿಪ್ಪು ಡ್ರಾಪ್ ಅನ್ನು ಏನೆಂದು ಕರೆಯಬೇಕು ಎಂದು ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ನಾವು ಅದನ್ನು ಟಿಪ್ಪು ಡ್ರಾಪ್ ಎಂದು ಕರೆದರೆ,  ಇತಿಹಾಸದಲ್ಲಿ ‘ತಪ್ಪು’ ಇರುವ ವ್ಯಕ್ತಿಯನ್ನು ಉಲ್ಲೇಖಿಸಿದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ,

ಬೆಂಗಳೂರಿನ ಹಳೆಯ ಭಾಗಗಳಲ್ಲಿ ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದ ಹಲವಾರು ಸ್ಮಾರಕಗಳಿವೆ, ಅವುಗಳ ಬಗ್ಗೆ ಸಂಶೋಧನೆ ನಡೆಸುವಾಗ ಏನೆಂದು ಅವುಗಳನ್ನು ಕರೆಯಬಹುದು ಎಂಬ ಕುತೂಹಲ ಮೂಡಿದೆ ಎಂದು ಮತ್ತೊಬ್ಬರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ,.

ಬ್ರಿಟಿಷರ ಆಳ್ವಿಕೆ ವಿರುದ್ಧ ಹೋರಾಟ ನಡೆಸಿದ ಟಿಪ್ಪುವನ್ನು  ಮೈಸೂರು ಹುಲಿ ಎಂದು ಕರೆಯುತ್ತಾರೆ, ಆದರೆ ಈಗ ಅವರು ಅದನ್ನು ಹೇಗೆ ಬದಲಿಸುತ್ತಿದ್ದಾರೆ ಎಂದು ನನಗೆ ಆಶ್ಚರ್ಯ ವಾಗುತ್ತದೆ, ಇದನ್ನು ಕೂಡ ಸರ್ಕಾರ ಬದಲಾಯಿಸುತ್ತದೆಯೇ ಎಂದು ಸಾಫ್ಟ್ ವೇರ್ ಉದ್ಯೋಗಿ ರಾಜೆಂದ್ರ ಎಂಬುವರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT