ರಾಜ್ಯ

ಹೊಸಕೋಟೆ ಮುಖ್ಯಮಂತ್ರಿ ಕಾರ್ಯಕ್ರಮದಿಂದ ದೂರ ಉಳಿದ ಬಚ್ಚೇಗೌಡ ಪುತ್ರ ಶರತ್

Manjula VN

ಬೆಂಗಳೂರು: ಹೊಸಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಳಿಯುವ ಬೆದರಿಕೆ ಹಾಕಿರುವ ಬಿಜೆಪಿ ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರು, ಹೊಸಕೋಟೆಯಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಿಂದ ದೂರ ಉಳಿದಿದ್ದರು ಎಂದು ತಿಳಿದುಬಂದಿದೆ. 

ಡಿಸೆಂಬರ್ 5 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದ ಹಿನ್ನಲೆಯಲ್ಲಿ ಶರತ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬೆದರಿಕೆ ಹಾಕಿದ್ದರು. ಇದೀಗ ಮುಖ್ಯಮಂತ್ರಿಗಳ ಕಾರ್ಯಕ್ರಮದಿಂದಲೂ ದೂರ ಉಳಿದಿರುವುದು, ಇಬ್ಬರ ನಡುವಿನ ವೈಮನಸ್ಸು ಹೆಚ್ಚಾಗಿದೆ ಎಂಬ ಸುಳಿವವನ್ನು ನೀಡಿದೆ. 

ಈ ನಡುವೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರೂ ಕೂಡ ಬಚ್ಚೇಗೌಡ ಅವರ ಹೆಸರಾಗಲೀ ಅಥವಾ ಅವರ ಪುತ್ರನ ಹೆಸರಾಗಲೀ ಭಾಷಣದಲ್ಲಿ ಎಲ್ಲಿಯೂ ಹೇಳಲಿಲ್ಲ. ಆದರೆ, ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಕೊಂಡಾಡಿದ್ದರು. 

ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿ ಇತ್ತು. ಕಳೆದೆರಡು ದಿನಗಳಿಂದ ಆರೋಗ್ಯ ಸಮಸ್ಯೆ ಕಾಡುತ್ತಿದ್ದರು. ಹೀಗಾಗಿಯ ಕಾರ್ಯಕ್ರಮಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದು ಬಚ್ಚೇಗೌಡ ಅವರು ಹೇಳಿದ್ದಾರೆ. 

ಅನರ್ಹ ಶಾಸಕರ ಅರ್ಜಿ ಇನ್ನೂ ಸುಪ್ರೀಂಕೋರ್ಟ್ ನಲ್ಲಿದೆ. ಹೀಗಾಗಿ ಬಿಜೆಪಿ ಅನರ್ಹ ಶಾಸಕ ನಾಗರಾಜ್ ಆಗಲೀ ಅಥವಾ ಶರತ್ ಆಗಲೀ ಕಣಕ್ಕಿಳಿಸುವ ಕುರಿತು ಘೋಷಣೆಗಳನ್ನು ಮಾಡಿಲ್ಲ. ನಾನು ಬಿಜೆಪಿ ನಾಯಕನಾಗಿದ್ದು, ಹೀಗಾಗಿ ನನ್ನ ಪುತ್ರ ಕೂಡ ಇದೇ ಪಕ್ಷಕ್ಕೆ ಸೇರಿದವನಾಗಿದ್ದಾರೆ. ಪಕ್ಷವನ್ನು ನಾವು ಎಂದಿಗೂ ತೊರೆಯುವುದಿಲ್ಲ ಎಂದು ತಿಳಿಸಿದ್ದಾರೆ. 

SCROLL FOR NEXT