ರಾಜ್ಯ

ಮಿಲಿಟರಿ ಸೇರಲು ಇದ್ದ ಅಡ್ಡಿ-ಆತಂಕಗಳಿಗೆ ಸೆಡ್ಡು ಹೊಡೆದ ಧಾರವಾಡ ಯುವತಿ!

Shilpa D

ಮಡಿಕೊಪ್ಪ: ಇದು ಭೀಮಕ್ಕ ಎಂ ಚವಾಣ್ 18 ವರ್ಷದ ಯುವತಿಯ ಯಶಸ್ಸಿನ ಕಥೆ, ಧಾರವಾಡ ಜಿಲ್ಲೆಯ ಮಡಿಕೊಪ್ಪ ಎಂಬ ರಿಮೋಟ್ ಗ್ರಾಮದಲ್ಲಿ ಅರಳಿ ನಿಂತಿರುವ ಪ್ರತಿಭೆಯಿದು, ತನ್ನ ಕಠಿಣ ಪರಿಶ್ರಮ ಮತ್ತು ಛಲದಿಂದಾಗಿ ಮಿಲಿಟರಿ ಅಧಿಕಾರಿಯಾಗಬೇಕೆಂಬ ತನ್ನ ಕನಸನ್ನು ನನಸು ಮಾಡಿಕೊಂಡಿರುವ ಛಲಂದಕಮಲ್ಲೆ  ಈಕೆ.

ಮಾಜಿ ರಕ್ಷಣೆ ಸಚಿವೆ ನಿರ್ಮಲಾ ಸೀತಾರಾಮನ್ ಮಿಲಿಟರಿ ಪೊಲೀಸ್ ಪಡೆಗೆ ಮಹಿಳೆಯರ ನೇಮಕ ಸಂಬಂಧ ತೆಗೆದುಕೊಂಡ ನಿರ್ಧಾರಕ ನಂತರ ಲಕ್ಷಾಂತರ ಮಹಿಳೆಯರು ಕೇಂದ್ರದ ಮಹಿಳಾ ಮಿಲಿಟರಿ ಪಡೆ ಸೇರಲು ಉತ್ಸುಕರಾಗಿದ್ದಾರೆ, 

ಈಗಾಗಲೇ ಮಹಿಳೆಯರು ಸಶಾಸ್ತ್ರ ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ,.ಅದರಲ್ಲಿ ಲಿಮಿಟೆಡ್ ಶಾಖೆಗಳಾದ ಮೆಡಿಕಲ್, ಲೀಗಲ್ ಹಾಗೂ ಶೈಕ್ಷಣಿಕ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಗ್ರಾಮೀಣ ಪ್ರದೇಶದಲ್ಲಿ ತನ್ನ ಶಾಲೆ ಮುಗಿಸಿದ ಭೀಮಕ್ಕ, ಶಾಲಾ ದಿನಗಳಲ್ಲಿ ತನ್ನ ವೀರಾಪುರದ ತಮ್ಮ ಶಾಲಾ ಶಿಕ್ಷಕಿಯ ಮಾತುಗಳಿಂದ ಪ್ರೇರಿತರಾಗಿ ಮಿಲಿಟರಿ ಸೇರಲು ಭೀಮಕ್ಕ ನಿರ್ಧಾರ ಮಾಡಿದ್ದಾರೆ.ಧಾರವಾಡದಲ್ಲಿ ಪಿಯಸಿ ವ್ಯಾಸಂಗ ಮಾಡುವಾಗ ಎನ್ ಸಿಸಿ ಗೆ ಸೇರಿದ್ದ ಆಕೆ  ಮತ್ತು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಮನಸ್ಸು ಮಾಡಿದರು.

ಕಾಲೇಜು ಮುಗಿದ ನಂತರ ತನ್ನ ಫಿಸಿಕಲ್ ಫಿಟ್ ನೆಸ್ ಗಾಗಿ ಗ್ರಾಮದ ಶಾಲಾ ಮೈದಾನದಲ್ಲಿ ವ್ಯಾಯಾಮ ಮಾಡುತ್ತಿದ್ದರು, ಇದನ್ನು ನೋಡಿದ ಆಕೆಯ ಸಂಬಂಧಿಗಳು, ಕಿತ್ತೂರಿನ ಗ್ರಾಮೀಣ ಯುವ ರಕ್ಷಣಾ ಅಕಾಡೆಮಿಗೆ ಸೇರುವಂತೆ ಸಲಹೆ ನೀಡಿದ್ದಾರೆ,.ಕಾಲೇಜು ರಜೆಯ ವೇಳೆ 2 ತಿಂಗಳುಗಳ ಕಾಲ ಆಕೆ ಅಲ್ಲಿ ತರಬೇತಿ ಪಡೆದಿದ್ದಾರೆ, ಅಕಾಡೆಮಿಯ ಮಾರ್ಗದರ್ಶಕರು ಫಾರ್ಮ್‌ಗಳನ್ನು ಭರ್ತಿ ಮಾಡುವ ಮೊದಲ ಹಂತದಿಂದ ಅವರಿಗೆ ಸಹಾಯ ಮಾಡಿದರು.

ನಾನು ಯುವತಿ ಎಂಬ ಕಾರಣಕ್ಕೆ ಮಿಲಿಟರಿ ಸೇರಲು ಸಾಧ್ಯವಿಲ್ಲ ಎಂದು ತಮ್ಮ ಊರಿನ ಜನರು ಅವಮಾನಿಸುತ್ತಿದ್ದರು, ನಾನು ಟ್ರ್ಯಾಕ್ ಸೂಟ್ ಧರಿಸಿ ಯುವಕರಂತೆ ಎಲ್ಲಾ ರೀತಿಯ ಕೆಲಸ ಮಾಡುತ್ತಿದ್ದೆ,ಇದನ್ನು ಸವಾಲಾಗಿ ಸ್ವೀಕರಿಸಿ ಎಲ್ಲಾ ರೀತಿಯ ಪ್ರಯತ್ನ ಮಾಡಿ ನನ್ನ ಗುರಿ ಸಾಧಿಸಿದ್ದೇನೆ ಎಂದು ಭೀಮಕ್ಕ ಹೇಳಿದ್ದಾರೆ. 

SCROLL FOR NEXT