ರಾಜ್ಯ

ಶಿರಸಿ: ಕಾಡಾನೆಗಳ ಹಿಂಡು ಕಂಡು ಹೆದರಿದ ಸ್ಥಳೀಯರು

Vishwanath S

ಶಿರಸಿ: ಹೊಲಗದ್ದೆಗಳಲ್ಲಿ ಹಗಲಿನಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿರುವುದು ತಾಲ್ಲೂಕಿನ ದಾಸನಕೊಪ್ಪ ಬದನಗೋಡ ಭಾಗದಲ್ಲಿ ಕೃಷಿಕರು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಗುರುವಾರ ಸ್ಥಳೀಯ ಕಾಡಂಚಿನ ಗದ್ದೆಗಳಲ್ಲಿ ನಾಲ್ಕು ಆನೆಗಳ ಹಿಂಡು ಕಾಣಿಸಿಕೊಂಡಿದೆ ಎಂದು ಬದನಗೋಡ ಗ್ರಾಪಂ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಮಾಹಿತಿ ನೀಡಿದರು ಕಾಡಾನೆಗಳು ಗದ್ದೆಯಲ್ಲಿ ಸಂಚರಿಸುತ್ತಿರುವುದನ್ನು ಕಂಡ  ಸ್ಥಳೀಯರು ಚಕಿತರಾಗಿ ಭಾರಿ ಕುತೂಹಲದಿಂದ ವೀಕ್ಷಿಸಿದರು ನಂತರ ಜನ ಗುಂಪು ಗುಂಪಾಗಿ ಸೇರಿ ದೊಡ್ಡದಾಗಿ ಗೌಜಿ ಎಬ್ಬಿಸಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದರು ಆದರೆ  ಹಿಂಡಿನಲ್ಲಿದ್ದ ಎರಡು ಆನೆಗಳು ಸಾರ್ವಜನಿಕರ ಗುಂಪಿನತ್ತ ತಿರುಗಿದಾಗ ಜನರೆಲ್ಲ ಗಾಬರಿಗೊಂಡು ಕಾಲ್ಕಿತ್ತು ಓಡತೊಡಗಿದರು.

ಈ ಮಧ್ಯೆ ಕಾಡಾನೆಗಳ ಹಿಂಡು ಸ್ಥಳೀಯ ಭತ್ತದ ಗದ್ದೆ ಮೆಕ್ಕೆಜೋಳ ಗೋವಿನ ಜೋಳ ಅನಾನಸ್ ಶುಂಠಿ ಬೆಳೆ ಪ್ರದೇಶದಲ್ಲಿ ಸಂಚರಿಸಿದ್ದು ಅವುಗಳಿಗೆ ಎಷ್ಟು ಹಾನಿಯಾಗಿದೆ ಎಂಬುದರ ನಿಖರ ಅಂದಾಜು   ಮಾಡಬೇಕಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವರದಿ: ಹೆಚ್ ಕೆ ಪಿ

SCROLL FOR NEXT