ರಾಜ್ಯ

ಬೆಂಬಲ ನೀಡುವ ಕುರಿತು ದೇವೇಗೌಡ ಫೋನ್ ಮಾಡಿಲ್ಲ: ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸಲಿದೆ ಎಂಬ ವರದಿಗಳ ಬೆನ್ನಲ್ಲೇ ಬೆಂಬಲ ನೀಡುವ ಕುರಿತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ನನಗೆ ಫೋನ್ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. 

ವರದಿಗಳಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ದೇವೇಗೌಡ ಅವರು ಮಾಜಿ ಪ್ರಧಾನಮಂತ್ರಿಗಳಾಗಿದ್ದು, ಯಾವುದು ಸರಿ ಹಾಗೂ ಯಾವುದು ತಪ್ಪು ಎಂದು ನಿರ್ಧರಿಸುವ ಸಾಮರ್ಥ್ಯ ಅವರಿಗಿದೆ. ದೇವೇಗೌಡ ಅವರ ಹೆಸರನ್ನು ನಾನು ಎಲ್ಲಿಯೂ ಹೇಳಿಲ್ಲ. ಅದನ್ನು ಎಂದಿಗೂ ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ. 

ದೇವೇಗೌಡ ಅವರೊಂದಿಗೆ ಯಡಿಯೂರಪ್ಪ ಅವರು ಫೋನ್ ನಲ್ಲಿ ಮಾತುಕತೆ ನಡೆಸಿದ್ದಾರೆಂಬ ವರದಿಗಳು ಸತ್ಯಕ್ಕೆ ದೂರವಾಗಿದೆ. ನಾನು ದೇವೇಗೌಡ ಅವರೊಂದಿಗೆ ಫೋನ್ ನಲ್ಲಿ ಮಾತಾಡಿಯೇ ಇಲ್ಲ ಎಂದು ತಿಳಿಸಿದ್ದಾರೆ. 
 
ಪ್ರತಿಭಟನಾನಿರತ ಜೆಡಿಎಸ್ ಕಾರ್ಯಕರ್ತರೊಬ್ಬರ ಮೇಲೆ ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ಕಠಿಣ ಕ್ರಮದ ವಿರುದ್ಧ ಈ ಹಿಂದೆ ದೇವೇಗೌಡ ಅವರು ಹರಿಹಾಯ್ದಿದ್ದರು. ಕಾರ್ಯಕರ್ತರ ವಿರುದ್ಧ ಕ್ರಮಗಳನ್ನು ಹಿಂದಕ್ಕೆ ಪಡೆದಯೇ ಹೋದಲ್ಲಿ ನ.15ರಿಂದ ಮುಖ್ಯಮಂತ್ರಿಗಳ ನಿವಾಸದ ಬಳಿ ಪ್ರತಿಭಟಿಸಲಾಗುತ್ತದೆ ಎಂದಿದ್ದರು. 
 
ಈ ಕುರಿತು ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ರಜೆ ಮೇಲೆ ಹೊರ ಹೋಗುವಂತೆಯೂ ತಿಳಿಸಲಾಗಿದೆ. ದೇವೇಗೌಡ ಅವರ ಮನಸ್ಸು ಪರಿವ ರ್ತಿಸಲಾಗುತ್ತದೆ. ದೇವೇಗೌಡ ಅವರು ಮಾಜಿ ಪ್ರಧಾನಿಗಳಾಗಿದ್ದು, ಅವರು ಹೇಳಿದಂತೆ ಕ್ರಮ ಕೈಗೊಳ್ಳುತ್ತೇನೆಂದಿದ್ದಾರೆ. 

SCROLL FOR NEXT