ರಾಜ್ಯ

ಜೈಲಿನಲ್ಲಿದ್ದಷ್ಟು ದಿನ ಡಿಕೆಶಿ ಏನು ಮಾಡುತ್ತಿದ್ದರು ಗೊತ್ತಾ?: 'ಜೈಲು ಕಥನ' ಬಿಚ್ಚಿಟ್ಟ ಕನಕಪುರ ಬಂಡೆ

Manjula VN

ಬೆಂಗಳೂರು: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿ 48 ದಿನಗಳನ್ನು ಕಳೆದ ಮಾಜಿ ಸಚಿವ ಡಿಕೆ.ಶಿವಕುಮಾರ್ ಅವರು, ಸೆರೆವಾಸದಲ್ಲಿದ್ದಷ್ಟು ದಿನ ಏನು ಮಾಡುತ್ತಿದ್ದರ, ಹೇಗಿದ್ದರು ಎಂಬ ವಿಚಾರವನ್ನು ಸ್ವತಃ ಬಿಚ್ಚಿಟ್ಟಿದ್ದಾರೆ. 

ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಮಾತನಾಡಿರುವ ಅವರು, ಸೆರೆವಾಸದ ಕೆಲ ಕುತೂಹಲಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. 

ಯಡಿಯೂರಪ್ಪ ಅವರು ನನ್ನಂತವನನ್ನೇ ಬಿಟ್ಟಿಲ್ಲ. ಇನ್ನು ಶಾಸಕರಿಗೆ ಅನುದಾನ ಕೊಡುತ್ತಾರಾ? ಮೊದಲು ನಮ್ಮ ಮನೆ ಸರಿ ಮಾಡಿಕೊಳ್ಳೋಣ. ನನಗೂ ಚಕ್ರ ತಿರುಗಿಸಲು ಬರುತ್ತದೆ ಎಂಬುದನ್ನು ತೋರಿಸುತ್ತೇನೆಂದು ಎಚ್ಚರಿಸಿದ್ದಾರೆ. 

ಕಾಂಗ್ರೆಸ್ ಕಚೇರಿ ನನಗೆ ದೇವಾಲಯ ಇದ್ದಂತೆ. ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ರೀತಿಯ ಮನಸ್ತಾಪಗಳಿಲ್ಲ. ನಾನು ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿಲ್ಲ. ಅಕ್ರಮವಾಗಿ ನಾನು ಏನನ್ನೂ ಮಾಡಿಲ್ಲ. ನನಗೆ ಬೆಂಬಲ ನೀಡಿದ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. 

ತಿಹಾರ್ ಜೈಲಿನಲ್ಲಿದ್ದಾಗ ನಂಜುಂಡೇಶ್ವರ ಸ್ವಾಮಿ ಪ್ರಾರ್ಥಿಸಿಕೊಂಡು ಭೂಮಿ ಮೇಲಿನ ಮಣ್ಣನ್ನು ತೆಗೆದು ತಲೆಯ ಮೇಲೆ ಹಾಕಿಕೊಳ್ಳುತ್ತಿದ್ದೆ. ಈ ಸಲಹೆಯನ್ನು ನನ್ನ ಪತ್ನಿ ನೀಡಿದ್ದಳು. ಜೈಲಿನ ಆವರಣದೊಳಗೆ ಇದ್ದ ಈಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದೆ. ಜೈಲಿನಲ್ಲಿದ್ದಾಗ ನಾನು ಹಾಗೂ ಚಿದಂಬರಂ ಇಬ್ಬರು ಉಭಯಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದೇವು. ಜೈಲಿನಲ್ಲಿ ಚಿದಂಬರಂ ಅವರನ್ನು ಹೇಗೆ ನೋಡಿಕೊಳ್ಳುತ್ತಿದ್ದರು. ನನ್ನನ್ನು ಹೇಗೆ ನೋಡಿಕೊಳ್ಳುತ್ತಿದ್ದರು ಎನ್ನುವುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆಂದು ಹೇಳಿದ್ದಾರೆ. 

SCROLL FOR NEXT