ರಾಜ್ಯ

ಬೆಳಗಾವಿ: ಸಕಲ ಸರ್ಕಾರಿ ಗೌರವದೊಡನೆ ಹುತಾತ್ಮ ಯೋಧನ ಅಂತ್ಯ ಸಂಸ್ಕಾರ

Raghavendra Adiga

ಬೆಳಗಾವಿ:  ಜಮ್ಮವಿನ ಪುಂಚ್ ಬಳಿ ಗುರುವಾರ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮನಾದ ಬೆಳಗಾವಿ ತಾಲೂಕಿನ ಉಚಗಾವ ಗ್ರಾಮದ ವೀರಯೋಧ ರಾಹುಲ ಸುಳಗೇಕರ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಸ್ವಗ್ರಾಮದಲ್ಲಿ ಸರ್ಕಾರ ಸಕಲ ಗೌರವದೊಂದಿಗೆ ನೆರೆವೇರಿತು.

ಬೆಳಗಾವಿಯಿಂದ ಉಚಗಾವದ ವರೆಗೆ ಯೋಧನ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ತರಲಾಯಿತು. ಅಪಾರ ಜನ ಮೆರವಣಿಗೆಯಲ್ಲಿ ಸಾಗಿ ಬಂದು ಅಂತಿಮ ದರ್ಶನ ಪಡೆದರು.

ವಿಶೇಷ ವಿಮಾನದ ಮೂಲಕ ಇಂದು ಮಧ್ಯಾಹ್ನ 1.30ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾಕ್ಟರ್ ಎಸ್.ಬಿ. ಬೊಮ್ಮನಹಳ್ಳಿ, ಪೋಲೀಸ್ ಆಯುಕ್ತ ಲೋಕೇಶ ಕುಮಾರ, ಜಿಲ್ಲಾ ಪಂಚಾಯಿತ್ ಸಿಇಓ ರಾಜೇಂದ್ರಕುಮಾರ್, ಬೆಳಗಾವಿಯ ಮರಾಠ ಲಘುಪಧಾತಿ ದಳದ ಸಿ ಬ್ರಿಗೇಡಿಯರ್ ಗೋವಿಂದ ಕಾಲವಾಡ ಹಾಗೂ ಸೈನಿಕರು ಹಿರಿಯ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು.

SCROLL FOR NEXT