ರಾಜ್ಯ

ರಾಮಮಂದಿರನ ಭಾರತದಲ್ಲದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ? ರೋಷನ್ ಬೇಗ್ ಪ್ರಶ್ನೆ

Raghavendra Adiga

ಬೆಂಗಳೂರು: ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ? ಇದನ್ನು ವರ್ಷದ ಹಿಂದೆಯೇ ಹೇಳಿದ್ದೇನೆ.ಅಯೋಧ್ಯೆ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಅನರ್ಹ ಶಾಸಕ ರೋಷನ್ ಬೇಗ್ ಹೇಳಿದ್ದಾರೆ.

ನಗರದ ರಸೆಲ್ ಮಾರ್ಕೆಟ್ ಚೌಕ್ ಭೇಟಿ ನೀಡಿದ ರೋಷನ್ ಬೇಗ್ ಮುಸ್ಲಿಂ ಸಮಾಜದ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು,ಸುನ್ನಿ ವಕ್ಫ್ ಬೋರ್ಡ್​ಗೆ ಅಯೋಧ್ಯೆಯಲ್ಲಿ ಐದು ಎಕರೆ ಭೂಮಿ ನೀಡುವ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಕೆಲವರು ಹೇಳಿದ್ದಾರೆ. ತೀರ್ಪು ಪ್ರಶ್ನಿಸಿ ಕೆಲವರು ಮೇಲ್ಮನವಿ ಹಾಕಲು ಮುಂದಾಗಿದ್ದಾರೆ.ಅಂಥ ಕೆಲಸ ಮಾಡಬೇಡಿ ಎಂದು ನಾನು ಅವರಲ್ಲಿ ಮನವಿ ಮಾಡುತ್ತೇನೆ. ನಮಗೂ ಈ ವಿಚಾರ ಸಾಕಾಗಿ ಹೋಗಿದೆ. ನಮಗೆ ಸಮಾನತೆ ಬೇಕು.ಜೊತೆಗೆ ಸೌಹಾರ್ದತೆಯಿಂದ ಬದುಕಬೇಕು.ಸುಪ್ರೀಂ ಕೋರ್ಟ್ ಒಳ್ಳೆಯ ತೀರ್ಪು ನೀಡಿದೆ ಎಂದು ಅವರು ಸುಪ್ರೀಂಕೋರ್ಟ್​​ ಆದೇಶವನ್ನು ಶ್ಲಾಘಿಸಿದರು.

ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಂ ಸ್ವಯಂ ಸೇವಕರನ್ನ ಕರೆದುಕೊಂಡು ಬರುತ್ತೇ ವೆ.5 ಎಕರೆ ಜಾಗದಲ್ಲಿ ಮಸೀದಿ ಕಟ್ಟುವಾಗ ಹಿಂದೂಗಳು ಬನ್ನಿ. ಹಿಂದೂ ಮುಸ್ಲಿಂಮರು ಸೇರಿ ರಾಮಮಂದಿರ,ಮಸೀದಿ ನಿರ್ಮಿಸೋಣ.ದೇಶದಲ್ಲಿ ಸಾಮರಸ್ಯದಿಂದ ಎಲ್ಲಾ ಧರ್ಮೀ ಯರು ಬದುಕೋಣ ಎಂದು ಅವರು ಮನವಿ ಮಾಡಿದರು.

SCROLL FOR NEXT