ರಾಜ್ಯ

ಮಂಡ್ಯ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Raghavendra Adiga

ಮಂಡ್ಯ: ಸಾಲದ ಬಾದೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ದೊಡ್ಡಸೋಮನಹಳ್ಳಿ  ಗ್ರಾಮದಲ್ಲಿ ನಡೆದಿದೆ.

 ಮೃತ ರೈತನನ್ನು ದೊಡ್ಡಸೋಮನಹಳ್ಳಿ ಗ್ರಾಮದ ಭದ್ರೇಗೌಡ(48) ಎಂದು ಗುರುತಿಸಲಾಗಿದೆ.

ಘಟನೆ ವಿವರ; 

ರೈತ ಭದ್ರೇಗೌಡ ಕೃಷಿ ಗಾಗಿ, ಕೆ.ಆರ್.ಪೇಟೆ ತಾಲ್ಲೂಕಿನಅಘಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಒಂದೂವರೆ ಲಕ್ಷ ಬೆಳೆ ಸಾಲ ಹಾಗೂ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 80ಸಾವಿರ  ಸಾಲ ಜೊತೆಗೆ  ಹಾಗೂ 4ಲಕ್ಷ ಕೈ ಸಾಲ ಮಾಡಿದ್ದರು,

ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆಗಾಗಿ ಸುಮಾರು 3ಕೊಳವೆ ಬಾವಿ ಕೊರೆಸಿದ್ದರು. ನೀರು ಸರಿಯಾಗಿ ಬಾರದೆ   ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಬೆಳೆದಿದ್ದ ರಾಗಿ ಒಣಗಿತ್ತು.ಇದರ ನಡುವೆ ಖಾಸಗಿ ಸಾಲಗಾರರ ಕಿರುಕುಳವೂ ಜಾಸ್ತಿಯಾಗಿತ್ತು, ಇದರಿಂದ ಮನನೊಂದ ತಮ್ಮ ಜಮೀನಿನಲ್ಲಿ ಇರುವ ಕೃಷಿ ಪಂಪ್ ಸೆಟ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. 

ಮೃತ ರೈತನಿಗೆ ವೃದ್ದ ತಾಯಿ ಪತ್ನಿ ಇಬ್ಬರು ಮಕ್ಕಳಿದ್ದಾರೆ. 

ಘಟನೆ ಕುರಿತು ಪತ್ನಿ ಮಮತಾ ಕೆ.ಆರ್.ಪೇಟೆ ಪಟ್ಟಣ ಪೋಲೀಸರಿಗೆ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಅಘಲಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ, ಅಘಲಯ ಸೊಸೈಟಿ ಅಧ್ಯಕ್ಷ ಹೋಬಳಿ ಕುಮಾರ್, ಡಿ.ಎಸ್.ನಾಗೇಂದ್ರ ಮತ್ತಿತರರು ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮೃತ ರೈತನ ಕುಟುಂಬದ ಆಕ್ರಂದನ ಮುಗಿಲು‌ ಮುಟ್ಟಿದೆ.

ವರದಿ-ನಾಗಯ್ಯ

SCROLL FOR NEXT