ಚಿಕ್ಕಮಗಳೂರಿನ ದತ್ತಪೀಠ ದೇಗುಲ 
ರಾಜ್ಯ

ಅಯೋಧ್ಯೆಯಂತೆ, ದತ್ತಪೀಠ ವಿವಾದವನ್ನು ಕೋರ್ಟ್ ಬಗೆಹರಿಸಲಿ: ಚಿಕ್ಕಮಗಳೂರು ಜನರ ಒತ್ತಾಯ 

ಶತಮಾನಗಳ ಹಳೆಯ ಅಯೋಧ್ಯೆ ಭೂ ವಿವಾದವನ್ನು ಸುಪ್ರೀಂ ಕೋರ್ಟ್ ಬಗೆಹರಿಸಿದ ನಂತರ ಚಿಕ್ಕಮಗಳೂರಿನ ಜನತೆ ಮೂರು ದಶಕಗಳ ದತ್ತಪೀಠ ವಿವಾದವನ್ನು ಕೂಡ ಬಗೆಹರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸುತ್ತಿದ್ದಾರೆ. 

ಚಿಕ್ಕಮಗಳೂರು: ಶತಮಾನಗಳ ಹಳೆಯ ಅಯೋಧ್ಯೆ ಭೂ ವಿವಾದವನ್ನು ಸುಪ್ರೀಂ ಕೋರ್ಟ್ ಬಗೆಹರಿಸಿದ ನಂತರ ಚಿಕ್ಕಮಗಳೂರಿನ ಜನತೆ ಮೂರು ದಶಕಗಳ ದತ್ತಪೀಠ ವಿವಾದವನ್ನು ಕೂಡ ಬಗೆಹರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸುತ್ತಿದ್ದಾರೆ. 


ದತ್ತ ಪೀಠ ಚಳವಳಿಯನ್ನು ಆರಂಭಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ನ್ಯಾಯಾಲಯದ ಹೊರಗೆ ವಿವಾದವನ್ನು ಬಗೆಹರಿಸಲು ಇರುವ ಎಲ್ಲಾ ಸಾಧ್ಯತೆಗಳನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.


2016-17ರಲ್ಲಿ ಸುಪ್ರೀಂ ಕೋರ್ಟ್ ಅಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಒಂದೊಳ್ಳೆಯ ಅವಕಾಶ ನೀಡಿತ್ತು. ದತ್ತಪೀಠ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿತ್ತು. ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಹೆಚ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು, ಅದು ಸಲ್ಲಿಸಿದ ವರದಿಯನ್ನು ಹಿಂದೂ ಹಣ ತಿರಸ್ಕರಿಸಿತ್ತು. ಸರ್ಕಾರದ ಪೂರ್ವಾಗ್ರಹಪೀಡಿತದಿಂದ ವಿವಾದ ಬಗೆಹರಿಯಲಿಲ್ಲ ಎಂದು ಸಚಿವ ಸಿ ಟಿ ರವಿ ಹೇಳಿದ್ದಾರೆ.


ವಿವಾದವೇನು?: 1986ರವರೆಗೆ ಚಿಕ್ಕಮಗಳೂರಿನ ತಾಲ್ಲೂಕಿನ ಬಾಬಾ ಬುಡನ್ ಗಿರಿ ಬೆಟ್ಟದಲ್ಲಿರುವ ದತ್ತ ಗುಹೆ ದೇವಾಲಯ ಮತ್ತು ಬಾಬಾಬುಡನ್ ಸ್ವಾಮಿ ದರ್ಗಾ ಹಿಂದೂ ಮತ್ತು ಮುಸಲ್ಮಾನರಿಗೆ ಸಾಮರಸ್ಯದ ಧಾರ್ಮಿಕ ಕೇಂದ್ರವಾಗಿತ್ತು. 


ದತ್ತಪೀಠದ ವ್ಯವಸ್ಥಾಪಕ ಸೈಯದ್ ಪೀರ್ ಮೊಹಮ್ಮದ್ ಶಾ ಖ್ವಾದ್ರಿ ಅವ್ಯವಹಾರ ನಡೆಸಿದ್ದಾರೆ ಎಂದು ಹಿಂದೂಗಳ ಪರ ಸಂಘಟನೆಗಳಾದ ವಿಎಚ್ ಪಿ, ಭಜರಂಗ ದಳ ಮತ್ತು ಗುರು ದತ್ತಾತ್ರೇಯ ಪೀಠ ಸಂವರ್ಧನ ಸಮಿತಿ ಪ್ರತಿಭಟನೆಯನ್ನು ಆರಂಭಿಸಿದವು. 


ದತ್ತಪೀಠ ವಿವಾದದಿಂದ ಸಿ ಟಿ ರವಿ, ಸುನಿಲ್ ಕುಮಾರ್ ನಂತಹ ರಾಜಕೀಯ ನಾಯಕರು ಬೆಳೆದರು ಎನ್ನಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT