ರಾಜ್ಯ

ಶಾಸಕ ತನ್ವೀರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಅತ್ಯಂತ ಶಾಂತ, ಹೃದಯವಂತಿಕೆಯುಳ್ಳ ಯುವಕ: ಸ್ಥಳೀಯರು

Manjula VN

ಮೈಸೂರು: ಅತ್ಯಂತ ಶಾಂತ ಹಾಗೂ ಹೃದಯವಂತಿಯುಳ್ಳ ಯುವಕ ಫರ್ಹಾನ್ ಪ್ರಭಾವಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಹೇಗೆ ಸಾಧ್ಯ ಎಂದು ಹೆಚ್'ಸಿಜಿ ರಸ್ತೆಯ ನಿವಾಸಿಗಳು ಆಶ್ಚರ್ಯ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ. 

ನಮ್ಮ ಏರಿಯಾದರಲ್ಲಿ ಜಗಳ, ಮಾತಿನ ಚಕಮಕಿ ನಡೆಯುವುದು ಸಾಮಾನ್ಯ. ಆದರೆ, ಫರ್ಹಾನ್ ಎಂದಿಗೂ ಸಾರ್ವಜನಿಕವಾಗಿ ಜಗಳ ಮಾಡುವುದನ್ನು ನೋಡಿಯೇ ಇರಲಿಲ್ಲ. ತನ್ನ ತಂದೆಯಂತೆಯೇ ಫರ್ಹಾನ್ ಕೂಡ ಶಾಂತ ಹಾಗೂ ಹೃದಯವಂತಿಕೆಯುಳ್ಳ ಯುವಕನಾಗಿದ್ದ. ಫರ್ಹಾನ್ ಮಾರಣಾಂತಿಕ ದಾಳಿ ನಡೆಸಿದ್ದಾನೆಂಬುದನ್ನು ನಮಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿ ಫರ್ಹಾನ್ ನೆರೆಮನೆಯ ಶಕೀಲಾ ಎಂಬುವವರು ತಿಳಿಸಿದ್ದಾರೆ. 

ಫರ್ಹಾನ್ ತಂಡೆ ಮಖ್ಬೂಲ್ ಅವರು ಮರದ ಕೆಲಸ ಮಾಡುತ್ತಿದ್ದಾರೆ. ಕಳೆದ 50 ವರ್ಷಗಳಿಂದಲೂ ಹೆಚ್'ಸಿಜಿ ರಸ್ತೆಯಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ನೆಲೆಯೂರಿದ್ದಾರೆ. ಫರ್ಹಾನ್ ಚಿಕ್ಕವನಿದ್ದಾಗಿನಿಂದಲೂ ನಾವು ಆತನನ್ನು ನೋಡಿದ್ದೇವೆ. ಸಹಾಯ ಮಾಡುವ ಮನಸ್ಥಿತಿಯುಳ್ಳ ವ್ಯಕ್ತಿತ್ವ ಆತನದ್ದು. ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದ ಎಂದು ಮತ್ತೊಬ್ಬ ನೆರೆಮನೆಯ ಮಹಿಳೆ ಉಮ್ಮಾ ಕುಲ್ಸುಂ ಹೇಳಿದ್ದಾರೆ.  

ಮಖ್ಬೂಲ್-ಶಾನು ಎಂಬ ದಂಪತಿಗಳ ಪುತ್ರ ಫರ್ಹಾನ್ ಆಗಿದ್ದು, ಈ ದಂಪತಿಗಳಿಗೆ ಇನ್ನೂ ಮೂವರು ಗಂಡು ಮಕ್ಕಳು ಹಾಗೂ ಓರ್ವಳು ಮಗಳಿದ್ದಾಳೆ. ಎಲ್ಲರಿಗೂ ವಿವಾಹವಾಗಿದ್ದು, ಮರಗೆಲಸ ಮಾಡುತ್ತಿದ್ದ ತಂದೆಗೆ ಫರ್ಹಾನ್ ಸಹಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಘಟನೆ ಬಳಿಕ ಫರ್ಹಾನ್ ಕುಟುಂಬಸ್ಥರು ಮನೆಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. 

SCROLL FOR NEXT