ಪಶ್ಚಿಮ ಘಟ್ಟ 
ರಾಜ್ಯ

ಇಂಗಾಲ ಹೊರಸೂಸುವಿಕೆ, ಪಶ್ಚಿಮ ಘಟ್ಟಗಳ ಅರಣ್ಯ ನಾಶಗಳಿಂದ ಕರ್ನಾಟಕ, ಕೇರಳಗಳಲ್ಲಿ ಪ್ರವಾಹ: ಅಧ್ಯಯನ 

ಬೃಹತ್ ಪ್ರಮಾಣದಲ್ಲಿ ಅರಣ್ಯ ನಾಶ ಮತ್ತು ಇಂಗಾಲದ ರಾಸಾಯನಿಕ ವಸ್ತುಗಳನ್ನು ಸರಿಯಾಗಿ ಬೇರ್ಪಡಿಸದೇ ಇರುವುದು ಕಳೆದ ಎರಡು ವರ್ಷಗಳಿಂದೀಚೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಉಂಟಾಗುತ್ತಿರುವ ಭಾರೀ ಪ್ರವಾಹಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಬೆಂಗಳೂರು: ಬೃಹತ್ ಪ್ರಮಾಣದಲ್ಲಿ ಅರಣ್ಯ ನಾಶ ಮತ್ತು ಇಂಗಾಲದ ರಾಸಾಯನಿಕ ವಸ್ತುಗಳನ್ನು ಸರಿಯಾಗಿ ಬೇರ್ಪಡಿಸದೇ ಇರುವುದು ಕಳೆದ ಎರಡು ವರ್ಷಗಳಿಂದೀಚೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಉಂಟಾಗುತ್ತಿರುವ ಭಾರೀ ಪ್ರವಾಹಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.


ಇಂಗಾಲದ ರಾಸಾಯನಿಕ ಬೇರ್ಪಡಿಸುವಿಕೆ(ಕಾರ್ಬನ್ ಸೀಕ್ವೆಸ್ಟ್ರೇಷನ್) ಒಂದು ನೈಸರ್ಗಿಕ/ಕೃತಕ ಪ್ರಕ್ರಿಯೆಯಾಗಿದ್ದು ಇದರ ಮೂಲಕ ಕಾರ್ಬನ್ ಡೈಆಕ್ಸೈಡನ್ನು ವಾತಾವರಣದಿಂದ ತೆಗೆದುಹಾಕಿ ಘನ ಅಥವಾ ದ್ರವ ರೂಪದಲ್ಲಿ ಪಡೆಯುವುದಾಗಿದೆ.


ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಇತ್ತೀಚೆಗೆ ನೀಡಿರುವ ಅಧ್ಯಯನ ವರದಿಯಲ್ಲಿ, ಬಹುತೇಕ ಅರಣ್ಯಗಳ ನಾಶದಿಂದ ಶೇಕಡಾ 20ರಿಂದ 25ರಷ್ಟು ಮಾನವಜನ್ಯ (ಮಾನವ-ಸಂಬಂಧಿತ) ಇಂಗಾಲದ ಹೊರಸೂಸುವಿಕೆಗೆ ಕಾರಣವಾಗುತ್ತದೆ, ಇದರಿಂದ ಹವಾಮಾನ ಬದಲಾವಣೆಯುಂಟಾಗುತ್ತದೆ. ಅರಣ್ಯಗಳ ನಾಶದಿಂದ ಸ್ಥಳೀಯ ಮಳೆಸುರಿಯುವ ಪ್ರಮಾಣದಲ್ಲಿ ಕೂಡ ಬದಲಾವಣೆಯಾಗುತ್ತದೆ.


ಅಧ್ಯಯನದಲ್ಲಿ ಕರ್ನಾಟಕ ಮತ್ತು ಕೇರಳ ಭಾಗದ ಪಶ್ಚಿಮ ಘಟ್ಟದ ದಕ್ಷಿಣ ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ಹವಾಮಾನ ಬದಲಾವಣೆಯಾಗುತ್ತದೆ. ಮಧ್ಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಉಷ್ಣಾಂಶ ಬದಲಾವಣೆಯಾಗುತ್ತಿದ್ದು ಮಳೆ ಬೀಳುವ ಪ್ರಮಾಣ ಜಾಸ್ತಿಯಾಗಿ ಕೇವಲ ಎರಡು ದಿನಗಳಲ್ಲಿ 100 ಮಿಲಿ ಮೀಟರ್ ನಷ್ಟು ಮಳೆ ಹೆಚ್ಚಾಗಿ ಸುರಿಯುತ್ತಿದೆ. ಪಶ್ಚಿಮ ಘಟ್ಟದ ಉತ್ತರ ಭಾಗದ ಅಕ್ಷಾಂಶದಲ್ಲಿ ಉಷ್ಣಾಂಶ 0.5ರಷ್ಟು ಹೆಚ್ಚಾಗಿದ್ದು ಮಳೆಯ ಪ್ರಮಾಣ 100 ಮಿಲಿ ಮೀಟರ್ ನಿಂದ 250 ಮಿಲಿ ಮೀಟರ್ ನಷ್ಟು ಕೇವಲ ನಾಲ್ಕು ದಿನಗಳಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Women's Reservation Bill: ಮಹಿಳೆಯರ ಕೋಪ ತಟ್ಟದೇ ಬಿಡಲ್ಲ..; ವಿಪಕ್ಷಗಳ ವಿರುದ್ಧ Amit Shah ಕೆಂಡಾಮಂಡಲ!

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು; ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ NDA ವಿಫಲ

Mysuru: ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತಿದ್ದ ಚಿರತೆ, ವೃದ್ಧ ತಾಯಿಯ ಹೊರಗೆಳೆದ ಮಗಳು, ಕಾರ್ಯಾಚರಣೆಯೇ ರೋಚಕ!

IPL 2026: KKR ವಿರುದ್ಧ GT ಗೆ 5 ವಿಕೆಟ್ ಜಯ, ಗಿಲ್ ಭರ್ಜರಿ ಬ್ಯಾಟಿಂಗ್

ಇರಾನ್ ಮಹತ್ವದ ನಿರ್ಧಾರ: ಹಾರ್ಮುಜ್ ಜಲಸಂಧಿ ನಿರ್ಬಂಧ ಸಂಪೂರ್ಣ ತೆರವು; ವಿದೇಶಾಂಗ ಸಚಿವರ ಘೋಷಣೆ!

SCROLL FOR NEXT