ರಾಜ್ಯ

ಸೇತುವೆ ಕುಸಿತ; 8 ಜನರ ಸಾವಿಗೆ ಕಾರಣವಾದ ಗುತ್ತಿಗೆದಾರನಿಗೆ 21 ಲಕ್ಷ ದಂಡ 

Srinivas Rao BV

ಗಂಗಾವತಿ: ತಾಲ್ಲೂಕಿನ ಆನೆಗೊಂದಿಯ ತಳವಾರ ಘಟ್ಟದಲ್ಲಿ ನಿಮರ್ಣ ಹಂತದಲ್ಲಿದ್ದ ಗಂಗಾವತಿ- ಹೊಸಪೇಟೆ ಸಂಪರ್ಕ ಕಲ್ಪಿಸುವ ಸೇತುವೆ 2013ಲ್ಲಿ ಕುಸಿದು ಬಿದ್ದು 8 ಜನರ ಸಾವಿಗೆ ಗುತ್ತಿಗೆದಾರ ಕಾರಣ ಎಂದು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಸೋಮವಾರ ಗುತ್ತಿಗೆದಾರನಿಗೆ ಶಿಕ್ಷೆ ಪ್ರಕಟಿಸಿದೆ. 

ಹೈದರಾಬಾದ್ ಮೂಲದ ಪ್ರಧಾನ ಗುತ್ತಿಗೆದಾರ ಬಿ.ಎಸ್. ರೆಡ್ಡಿಗೆ 21.60 ಲಕ್ಷ ರೂಪಾಯಿ ದಂಡ ಹಾಗೂ ಸೂಪರ್ ವೈಸರ್ ಆಗಿದ್ದ ಪ್ರತಾಪ್ ರೆಡ್ಡಿಗೆ ತಲಾ 250 ರೂಪಾಯಿ ದಂಡ ಹಾಗೂ ವಿವಿಧ ಐಪಿಸಿ ಕಲಂಗಳಗೆ ಪ್ರತ್ಯೇಕ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ. ಸಾವನ್ನಪ್ಪಿದ ಎಂಟು ಜನರ ಕುಟುಂಬಕ್ಕೆ ತಲಾ ಎರುವರೆ ಲಕ್ಷ ನಗದು ಪರಿಹಾರ, ಗಂಭಿರವಾಗಿ ಗಾಯಗೊಂಡ ಮೂರು ಜನರಿಗೆ ತಲಾ 25 ಸಾವಿರ ಹಾಗೂ ಸಾಧಾರಣ ಗಾಯಗೊಂಡ 34 ಜನರಿಗೆ ತಲಾ ಎರುವರೆ ಸಾವಿರದಂತೆ ಒಟ್ಟು 21.60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 

ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ. ನದಾಫ್ ತೀಪರ್ು ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜ ವಿಜಯೇಂದ್ರ ಪ್ರಭು ವಾದ ಮಂಡಿಸಿದ್ದರು.

ವರದಿ: ಎಂಜೆ ಶ್ರೀನಿವಾಸ್
 

SCROLL FOR NEXT