ರಾಜ್ಯ

ಅಪ್ರಾಪ್ರೆಯ ಮೇಲೆ ಅತ್ಯಾಚಾರ ಪ್ರಕರಣ : ಇಬ್ಬರು ಆರೋಪಿಗಳಿಗೆ 20 ವರ್ಷ ಜೈಲು

Srinivas Rao BV

ಉಡುಪಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ, ಜೀವಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿ ರಾಜಸ್ಥಾನ ಮೂಲಕ ಇಬ್ಬರು ವ್ಯಕ್ತಿಗಳಿಗೆ ಜಿಲ್ಲಾ ವಿಶೇಷ ನ್ಯಾಯಾಲಯ 20 ವರ್ಷಗಳ ಸೆರೆವಾಸ ವಿಧಿಸಿದೆ.

ಉಡುಪಿ ನಗರದ ಹೊರವಲಯದ ಅಪ್ರಾಪ್ತೆಯ ಮೇಲೆ 2016ರಲ್ಲಿ ನಡೆದ ಅತ್ಯಾಚಾರ ಪ್ರಕರಣ ಇದಾಗಿದ್ದು, ಮುಕೇಶ್ ಮಾಲಿ(20), ಪದಮ್ ಸಿಂಗ್(28) ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ. ಬಾಲಕಿಯ ತಂದೆ ಟೈಲ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.  ಅದೇ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ರಾಜಸ್ಥಾನ ಮೂಲಕ ವ್ಯಕ್ತಿಗಳು ಉಡುಪಿಯ ಬಡಗಬೆಟ್ಟುವಿನಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದರು.
 

SCROLL FOR NEXT