ರಾಜ್ಯ

ಮುಖ್ಯೋಪಾಧ್ಯಾಯರೇ ಇಲ್ಲದz ನಡೆಯುತ್ತಿದೆ ರಾಜ್ಯದ ಅರ್ಧದಷ್ಟು ಸರ್ಕಾರಿ ಶಾಲೆಗಳು!

Manjula VN

ಬೆಂಗಳೂರು: ಮುಖ್ಯೋಪಧ್ಯಾಯರೇ ಇಲ್ಲದೇ ರಾಜ್ಯದಲ್ಲಿ ಶೇ.49ರಷ್ಟು ಸರ್ಕಾರಿ ಶಾಲೆಗಳು ಮುನ್ನಡೆಯುತ್ತಿರುವ ಇದೀಗ ಬಹಿರಂಗಗೊಂಡಿದೆ. 

ಶಾಲಾ ಶಿಕ್ಷಣ ಸುಧಾರಣೆಗೆ ಹಾಗೂ ಅಧಿಕ ಶಾಲೆಗಳ ನಡುವೆ ಸಂಪರ್ಕ ಕಲ್ಪಿಸುವ ಶಗುನ್ ಪೋರ್ಟಲ್ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದು, 2015-16 ಮತ್ತು 2016-17 ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಶೇ.51ರಷ್ಟು ಮುಖ್ಯೋಪಧ್ಯಾಯರು ಹಾಗೂ ಪ್ರಾಂಶುಪಾಲರನ್ನು ಹೊಂದಿದೆ ಎಂದು ತಿಳಿಸಿದೆ.

ನೀತಿ ಆಯೋಗ ಅಭಿವೃದ್ಧಿಪಡಿಸಿರುವ ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಾಂಕ ಈ ವರದಿಯನ್ನು ಬಹಿರಂಗಪಡಿಸಿದ್ದು, ರಾಜ್ಯದಲ್ಲಿರುವ 3,315 ಶಾಲೆಗಳು ಕೇವಲ ಏಕೈಕ ಶಿಕ್ಷಕರಿಂದ ನಡೆಯುತ್ತಿದೆ ಎಂದು ತಿಳಿಸಿದೆ. 

ಸರ್ಕಾರಿ ಶಾಲೆಗಳಲ್ಲಿ ಪ್ರಾಂಶುಪಾಲರು ಹಾಗೂ ಮುಖ್ಯೋಪಧ್ಯಾಯರು ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರಿಗೆ ವೇತನ ನೀಡುವುದು ಆಡಳಿತ ನೋಡಿಕೊಳ್ಳುತ್ತಾರೆ. ಅಲ್ಲದೆ, ಶಿಕ್ಷಣ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಾರೆಂದು ಸರ್ಕಾರಿ ಶಾಲೆಯ ಮಾಜಿ ಶಿಕ್ಷಕರೊಬ್ಬರು ಹೇಳಿದ್ದಾರೆ.

ಮುಖ್ಯೋಪಾಧ್ಯಾಯರ ನೇಮಕಾತಿಯನ್ನು 2012ರಲ್ಲಿ ಸ್ಥಗಿತಗೊಂಡಿದೆ. ಶಿಕ್ಷಣ ಇಲಾಖೆ ನೀರಸ ಪ್ರಾತಿನಿಧ್ಯಕ್ಕೆ ಇದೂ ಒಂದು ಪ್ರಮುಖ ಕಾರಣವಾಗಿದೆ ಎಂದು 

SCROLL FOR NEXT