ಅನೈತಿಕ ಸಂಬಂಧದ ಶಂಕೆ: ಇಂಡಿಯಲ್ಲಿ ಮಾವ, ಸೊಸೆ ಬರ್ಬರ ಹತ್ಯೆ!
ಅನೈತಿಕ ಸಂಬಂ ದಹದ ಶಂಕೆಯ ಹಿನ್ನೆಲೆಯಲ್ಲಿ ಮಾವ ಮತ್ತು ಸೊಸೆ ಬರ್ಬರ ಹತ್ಯೆಗೀಡಾಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನ ಖೇಡಗಿ ಕ್ರಾಸ್ ಬಳಿ ನಡೆದಿದೆ.
ವಿಜಯಪುರ: ಅನೈತಿಕ ಸಂಬಂ ದಹದ ಶಂಕೆಯ ಹಿನ್ನೆಲೆಯಲ್ಲಿ ಮಾವ ಮತ್ತು ಸೊಸೆ ಬರ್ಬರ ಹತ್ಯೆಗೀಡಾಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನ ಖೇಡಗಿ ಕ್ರಾಸ್ ಬಳಿ ನಡೆದಿದೆ.
ತಾಲೂಕಿನ ಖೇಡಗಿ ಕ್ರಾಸ್ ಸಮೀಪದ ತೋಟದ ಮನೆಯಲ್ಲಿ ನಡೆದ ಘಟನೆಯಲ್ಲಿ ಶಿರಗೂರ ಗ್ರಾಮದ ನಿವಾಸಿಗಳು ಮಾವ ಮಾಳಪ್ಪ ಧರ್ಮಣ್ಣ ಪೂಜಾರಿ (65) ಹಾಗೂ ಸೊಸೆ ರೇಣುಕಾ ಪುಟ್ಟಣ್ಣ ಪೂಜಾರಿ (35) ಹತ್ಯೆಯಾಗಿದ್ದಾರೆ.
ರೇಣುಕಾಳ ಪತಿ ಪುಟ್ಟಣ್ಣನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ತಂದೆ ಹಾಗೂ ಪತ್ನಿ ನಡುವೆ ಅನೈತಿಕ ಸಂಬಂಧವಿದೆ ಎಂದು ಅನುಮಾನಗೊಂಡಿದ್ದ ಪುಟ್ಟಣ್ಣ ಕಳೆದ ರಾತ್ರಿ ಈ ಜೋಡಿ ಕೊಲೆ ಮಾಡಿದ್ದಾನೆ.
ಮೃತರು ಶಿರಗೂರ ಗ್ರಾಮಸ್ಥರಾಗಿದ್ದು ಹೊಟ್ಟೆಪಾಡಿಗಾಗಿ ಖೇಡಗಿಯ ಶ್ರೀಶೈಲ ಸೊನ್ನ ಅವರ ಹೊಲದಲ್ಲಿ ಕೆಲಸಕ್ಕಿದ್ದರು.
ಕೃತ್ಯದ ನಂತರ ಆರೋಪಿ ತಲೆಮರೆಸಿಕೊಂಡಿದ್ದು ಘಟನೆ ಸಂಬಂಧ ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.