ರಾಜ್ಯ

ರಾಜ್ಯದ ಮೊದಲ ಸುಸಜ್ಜಿತ ನೈಸರ್ಗಿಕ ಅನಿಲ ಘಟಕ ಹಾಗೂ ಸಿ.ಎನ್.ಜಿ. ಫಿಟ್‌ಮೆಂಟ್ ಕೇಂದ್ರ ಶುಭಾರಂಭ'

Raghavendra Adiga

ಬೆಂಗಳೂರು::  ಫ್ಯೂಚರ್ ಮೊಬಿಲಿಟಿ ಸಲ್ಯೂಷನ್ಸ್‌ನಿಂದ ರಾಜ್ಯದ ಮೊದಲ ಸುಸಜ್ಜಿತ ಪರಿಸರ ಸ್ನೇಹಿ ನೈಸರ್ಗಿಕ ಅನಿಲ - ಸಿಎನ್‌ಜಿ ಘಟಕ ಹಾಗೂ ಪರಿಸರ ಸ್ನೇಹಿ ಸಿಎನ್‌ಜಿ ವಾಹನವಾಗಿ ಪರಿವರ್ತಿಸುವ ಆಧುನಿಕ ಸಿ.ಎನ್.ಜಿ. ಫಿಟ್‌ಮೆಂಟ್ ಕೇಂದ್ರ ನಗರದ ಹೊಸೂರು ರಸ್ತೆಯ ಬೊಮ್ಮಸಂದ್ರದಲ್ಲಿಂದು ಶುಭಾರಂಭ ಮಾಡಿತು.

ಆನೆಕಲ್ ಶಾಸಕ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಟಿ.ಎ.ಶರವಣ ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್ ನೂತನ ಕೇಂದ್ರಕ್ಕೆ ಚಾಲನೆ ನೀಡಿದರು.

ಸಿ.ಎನ್.ಜಿ. ಪರಿಸರ ಸ್ನೇಹಿಯಾಗಿದ್ದು, ಆರ್ಥಿಕವಾಗಿ ಲಾಭದಾಯಕವಾಗಿದೆ. ದಕ್ಷತೆ ಮತ್ತು ಸುರಕ್ಷಿತವಾಗಿದ್ದು, ನೈಸರ್ಗಿಕ ಅನಿಲ ಭವಿಷ್ಯದ ಇಂಧನವಾಗಿದೆ. ಬೆಂಗಳೂರು ನಗರ ಆಟೋಮೊಬೈಲ್ ಕ್ಷೇತ್ರದಲ್ಲಿ ಗಣನೀಯವಾಗಿ ಬೆಳವಣಿಗೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಫ್ಯೂಚರ್ ಮೊಬಿಲಿಟಿ ಸಲ್ಯೂಷನ್ಸ್ ಸಿ.ಎನ್.ಜಿ. ಫಿಟ್‌ಮೆಂಟ್ ಸೆಂಟರ್ ಆರಂಭಿಸಿದೆ.

SCROLL FOR NEXT