ರಾಜ್ಯ

ವಿಧಾನಸಭೆ ವಿಪಕ್ಷ ನಾಯಕ ಆಯ್ಕೆಗೆ ಮುಂದುವರೆದ ಕಸರತ್ತು: ಮಿಸ್ತ್ರಿ ಮುಂದೆ ಶಾಸಕರಿಂದ ಸಿದ್ದು ಪರ ವಕಾಲತ್ತು

Manjula VN

ಬೆಂಗಳೂರು: ವಿಧಾನ ಸಭೆ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಕೈ ನಾಯಕರ ಸಭೆಯಲ್ಲಿ ಬಹುತೇಕ ಕಾಂಗ್ರೆಸ್ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಬೇಕೆಂದು ವಕಾಲತ್ತು ವಹಿಸಿದ್ದಾರೆ.

ವಿಪಕ್ಷ ಸ್ಥಾನಕ್ಕೆ ಕಣ್ಣಿಟ್ಟಿರುವ ಡಾ.ಜಿ.ಪರಮೇಶ್ವರ್ ಹಾಗೂ ಎಚ್.ಕೆ ಪಾಟೀಲ್ ತಮಗೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಎಐಸಿಸಿ ಪ್ರಧಾನ ಕಾರ್ಯದರ್ಶಿ ಭೇಟಿ ಮಾಡಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ 2018 ರಲ್ಲಿ ಚುನಾವಣೆ ಉಸ್ತುವಾರಿ ವಹಿಸಿದ್ದರು .ವಿಧಾನಸಭೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರನ್ನು ಯಾರನ್ನ ಮಾಡಬೇಕು. ವಿಧಾನ ಸಭೆಯ ಮುಖ್ಯ ಸಚೇತಕರನ್ನಾಗಿ ಯಾರನ್ನೂ ನೇಮಿಸಬೇಕು ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಸಹಜವಾಗಿ ಎಲ್ಲರ ಅಭಿಪ್ರಾಯ ಸಂಗ್ರಹ ನಡೆಸಲಾಗುತ್ತಿದೆ. ಹೈಕಮಾಂಡ್ ಯಾರಿಗೋ ಒಬ್ಬರಿಗೇ ನಾಯಕನ ಸ್ಥಾನ ನೀಡುವುದು. ಸಿದ್ದರಾಮಯ್ಯ,ಎಚ್.ಕೆ. ಪಾಟೀಲ್ ಇಬ್ಬರೂ ಪ್ರತಿಪಕ್ಷ ನಾಯಕ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಪರಿಷತ್ ನಲ್ಲಿ ಪ್ರತಿಪಕ್ಷ ನಾಯಕರು ಯಾರಾಗುತ್ತಾರೆ ಎಂಬುದು ಪರಿಷತ್ ಸದಸ್ಯರಿಗೆ ತಿಳಿದಿದೆ.ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಂಘಟನೆ ಅನಿವಾರ್ಯವಾಗಿದೆ ಹೀಗಾಗಿ ಹೈಕಮಾಂಡ್ ಸೂಕ್ತ ವ್ಯಕ್ತಿ ಯನ್ನು ಆಯ್ಕೆ ಮಾಡಲಿದೆ ಅವರು ಎಂದರು.

SCROLL FOR NEXT