ವಾಹನಗಳಿಗೆ ಪೂಜೆ 
ರಾಜ್ಯ

ಬೆಂಗಳೂರು: 'ಅಕ್ಸಿಡೆಂಟ್ ಗಣೇಶ ದೇವಾಲಯ' ಬಳಿ ವಾಹನಗಳಿಗೆ ಪೂಜೆ 

ಅಯುಧ ಪೂಜೆ ಪ್ರಯುಕ್ತ ಅಕ್ಸಿಡೆಂಟ್ ಗಣೇಶ ದೇವಾಲಯ ಎಂದೇ ಪ್ರಸಿದ್ಧಿಯಾಗಿರುವ ಬೆಂಗಳೂರು ನಗರದ  ಪ್ರಸನ್ನ ಗಣಪತಿ ದೇವಾಲಯದ ಬಳಿ ವಾಹನಗಳಿಗೆ ಮಾಲೀಕರು ಹಾಗೂ ಚಾಲಕರು  ಪೂಜೆ ಸಲ್ಲಿಸಿದರು.

ಬೆಂಗಳೂರು: ಅಯುಧ ಪೂಜೆ ಪ್ರಯುಕ್ತ ಅಕ್ಸಿಡೆಂಟ್ ಗಣೇಶ ದೇವಾಲಯ ಎಂದೇ ಪ್ರಸಿದ್ಧಿಯಾಗಿರುವ ಬೆಂಗಳೂರು ನಗರದ  ಪ್ರಸನ್ನ ಗಣಪತಿ ದೇವಾಲಯದ ಬಳಿ ವಾಹನಗಳಿಗೆ ಮಾಲೀಕರು ಹಾಗೂ ಚಾಲಕರು  ಪೂಜೆ ಸಲ್ಲಿಸಿದರು.

ಅಯುಧ ಪೂಜೆ ಸಂದರ್ಭದಲ್ಲಿ ವಾಹನಗಳಿಗೆ  ಈ ದೇವಾಲಯದ ಬಳಿ ಪೂಜೆ ಸಲ್ಲಿಸದಿದ್ದರೆ ಅಕ್ಸಿಡೆಂಟ್ ಆಗಲಿದೆ ಎಂಬ ನಂಬಿಕೆ  ಜನರಲ್ಲಿ ಮನೆ ಮಾಡಿದೆ. ಇದರಿಂದಾಗಿ ಪ್ರಸನ್ನ ಗಣಪತಿ ದೇವಾಲಯ ಅಕ್ಸಿಡೆಂಟ್ ಗಣೇಶ ದೇವಾಲಯ ಎಂದೇ ಖ್ಯಾತಿಯಾಗಿದೆ.

ವಾಹನಗಳ ಮಾಲೀಕರು ಹಾಗೂ ಚಾಲಕರು ತಮ್ಮ  ವಾಹನಗಳಿಗೆ ಹೂ ಹಾಗೂ ಬಾಳೆಕಂದುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಯಾವುದೇ ಹೊಸ ವಾಹನ ಖರೀದಿಸಿದ್ದರೂ ಇಲ್ಲಿ ಬಂದೂ ಪೂಜೆ ಮಾಡುತ್ತಿದ್ದೇವು. ಆದರೆ, ಎರಡು ಬಾರಿ ಪೂಜೆ ಮಾಡಲಿಲ್ಲ. ಇದರಿಂದಾಗಿ  ನಮ್ಮ ವಾಹನಕ್ಕೆ ಅಪಘಾತವಾಗಿತ್ತು ಎಂದು ಸ್ಥಳೀಯ ನಿವಾಸಿ ಅನಿತಾ  ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಹೊಸದಾಗಿ ವಾಹನಗಳನ್ನು ಖರೀದಿಸಿದಾಗ ಇಲ್ಲಿಗೆ ಬಂದು ಪೂಜೆ ಮಾಡುವುದಾಗಿ ಮತ್ತೊಬ್ಬ ನಿವಾಸಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 2025: UAE ವಿರುದ್ಧ ಭಾರತಕ್ಕೆ 9 ವಿಕೆಟ್ ಗಳ ಜಯ

ನೇಪಾಳ ಬಿಕ್ಕಟ್ಟು: ಭಾರತದಲ್ಲಿ ಕಟ್ಟೆಚ್ಚರ; ಸಹಾಯವಾಣಿ ಆರಂಭ; ಕಠ್ಮಂಡುವಿಗೆ ವಿಮಾನ, ಬಸ್ ಸೇವೆ ರದ್ದು!

ಮಂಗಳೂರು: ನಕಲಿ ಆಧಾರ್ ಕಾರ್ಡ್‌ ತಯಾರಿಸಿ ಸರ್ಕಾರಿ ಇಲಾಖೆಗಳು, ನ್ಯಾಯಾಲಯಗಳಿಗೆ ವಂಚನೆ; ವ್ಯಕ್ತಿಯ ಬಂಧನ

2,929 ಕೋಟಿ ರೂ ವಂಚನೆ ಆರೋಪ: Anil Ambani ವಿರುದ್ಧ ಹೊಸ ಪ್ರಕರಣ ದಾಖಲು

ಗುಜರಾತ್ ಫ್ಲೋರೋ ಕೆಮಿಕಲ್ ಕಂಪನಿಯಲ್ಲಿ ವಿಷಕಾರಿ ಅನಿಲ ಸೋರಿಕೆ: ಓರ್ವ ಸಾವು, 12 ಮಂದಿ ಆಸ್ಪತ್ರೆಗೆ ದಾಖಲು

SCROLL FOR NEXT