ಸಂಗ್ರಹ ಚಿತ್ರ 
ರಾಜ್ಯ

ದಸರಾ ಹಬ್ಬದ ನಡುವೆ ಜವರಾಯನ ಅಟ್ಟಹಾಸ! ಪ್ರತ್ಯೇಕ ಅಪಘಾತದಲ್ಲಿ 6 ಮಂದಿ ದುರ್ಮರಣ

ರಾಜ್ಯಾದ್ಯಂತ ದಸರಾ ಸಂಭ್ರಮ ಮನೆ ಮಾಡಿದೆ. ಆದರೆ ಈ ನಡುವೆ ರಾಜ್ಯದ ಉತ್ತರ ಭಾಗದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಆರು ಮಂದಿ ದಾರುಣ ಸಾವಿಗೀಡಾಗಿದ್ದಾರೆ. 

ಕಲಬುರಗಿ/ವಿಜಯಪುರ: ರಾಜ್ಯಾದ್ಯಂತ ದಸರಾ ಸಂಭ್ರಮ ಮನೆ ಮಾಡಿದೆ. ಆದರೆ ಈ ನಡುವೆ ರಾಜ್ಯದ ಉತ್ತರ ಭಾಗದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಆರು ಮಂದಿ ದಾರುಣ ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಕಾರು-ಬೈಕ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದರೆ ವಿಜಯಪುರ ಜಿಲ್ಲೆ ಮಹಾರಾಷ್ಟ್ರ ಗಡಿ ಸಮೀಪದ ಕುರಗಟಕಿ ಗ್ರಾಮದಲ್ಲಿ ಮರಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಸವಾರರು ಮೃತಪಟ್ಟಿದ್ದಾರೆ.

ಚಿಂಚೋಳಿ ಹೊರವಲಯದ ಮೈಲಾರಲಿಂಗ ದೇವಸ್ಥಾನ ಬಳಿ ನಡೆದ ಘಟನೆಯಲ್ಲಿ ಕಾರು ಚಾಲಕ ಶಕೀಲ್​​ಬಾಬು (41) ಹಾಗೂ ದೇಗಲಮಡಿ ಗ್ರಾಮದ ಬೈಕ್ ಸವಾರ ಮಲ್ಲಪ್ಪ (23) ಸ್ಥಳದಲ್ಲೇ ಸಾವನ್ನಪ್ಪಿದರೆ ದ್ವಿಚಕ್ರ ವಾಹನದ ಹಿಂಬದಿ ಸವಾರ  ನಾಶೀರ್ ಕೊರಬಾ (21) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಹೈದರಾಬಾದ್​ನಿಂದ ಗಡಿಕೇಶ್ವರ ಗ್ರಾಮದತ್ತ ಕಾರು ತೆರಳುತ್ತಿತ್ತು ಎನ್ನಲಾಗಿದ್ದು ದೇಗಲಮಡಿ ಗ್ರಾಮದ ಸಮೀಪದಲ್ಲಿ ಅಪಘಾತವಾಗಿದೆ. ಘಟನೆ ಸಂಬಂಧ ಚಿಂಚೋಳಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರದ ಮಹಾರಾಷ್ಟ್ರ ಗಡಿ ಸಮೀಪದಲ್ಲಿನ ಕುರಗಟಕಿ ಬಳಿ ನಡೆಅ ಘಟನೆಯಲ್ಲಿ ಗ್ರಾಮದ ನಿವಾಸಿಗಳಾದ ಮಹೇಶ ನರೂಟಿ (22), ಅಂಬಜ್ಜ ಹವಮಾನೆ(25) ಮತ್ತು ಲೋಣೆ ಗ್ರಾಮದ ನಿವಾಸಿ ರಾಜಕುಮಾರ ಪೂಜಾರಿ (20) ಮೃತಪಟ್ಟಿದ್ದಾರೆ.ಇವರು ಟಾಕಳಿ ಕಡೆಯಿಂದ ಕುರಗಟಕಿ ಕಡೆ ತೆರಳುತ್ತಿದ್ದರು.ಘಟನೆಯು ಸೋಲಾಪುರದ ಮಂದ್ರೂಪ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್