ರಾಜ್ಯ

ಬಣ್ಣಗಳ ಚಿತ್ತಾರಗಳಿಂದ ಜಂಬೂ ಸವಾರಿಗೆ ಸಿದ್ದವಾಗಿರುವ ಆನೆಗಳು!

Sumana Upadhyaya

ಮೈಸೂರು: ಐತಿಹಾಸಿಕ ಮೈಸೂರು ದಸರಾಕ್ಕೆ ಮಂಗಳವಾರ ಸಾಯಂಕಾಲ ತೆರೆ ಬೀಳಲಿದೆ. 


ಇಂದು ಸಂಜೆ ನಡೆಯುವ ಅದ್ದೂರಿ ಮನಮೋಹಕ ಜಂಬೂ ಸವಾರಿಗೆ ಆನೆಗಳನ್ನು ಸಾಂಪ್ರದಾಯಿಕವಾಗಿ ಸುಂದರವಾಗಿ ಅಲಂಕಾರ ಮಾಡಲಾಗಿದೆ. 


ಆನೆಗಳ ಸೊಂಡಿಲು, ಕಿವಿ ಮತ್ತು ಕಾಲುಗಳಿಗೆ ಸುಂದರವಾಗಿ ಕೆಂಪು, ಬಿಳಿ, ಹಸಿರು ಮತ್ತು ಹಳದಿ ಬಣ್ಣಗಳಿಂದ ಚಿತ್ತಾರ ಬಿಡಿಸಲಾಗಿದೆ. ಜಿಲ್ಲಾಡಳಿತ ಜಂಬೂ ಸವಾರಿಯ ಸಕಲ ಸಿದ್ದತೆಯನ್ನು ಪರಿಶೀಲಿಸಿತು. 


ಜಂಬೂ ಸವಾರಿ 4 ಕಿಲೋ ಮೀಟರ್ ದೂರದವರೆಗೆ ನಡೆಯುವ ಮೆರವಣಿಗೆಯಾಗಿದೆ. ಮೈಸೂರು ಅರಮನೆಯ ಮುಂಭಾಗ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿ ಮೇಲೆ ಮುಖ್ಯ ಪೂಜಾ ಕೈಂಕರ್ಯಗಳು ನಡೆಯಲಿದೆ.


ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ವರ್ಷ 39 ಸ್ಥಬ್ಧ ಚಿತ್ರಗಳು ಭಾಗಿಯಾಗಲಿವೆ. ಜಾನಪದ ಸಂಗೀತಗಾರರು ಮತ್ತು ನೃತ್ಯಗಾರರು ದೇಶದ ನಾನಾ ಕಡೆಗಳಿಂದ ಆಗಮಿಸುತ್ತಿದ್ದಾರೆ. 

SCROLL FOR NEXT