ರಾಜ್ಯ

ಮೈಸೂರು ದಸರಾ: ಪಂಜಿನ ಕವಾಯತು,ಪ್ರೇಕ್ಷಕರ ಮೈನವಿರೇಳಿಸಿದ ಸಾಹಸ ಪ್ರದರ್ಶನಗಳು 

Nagaraja AB

ಮೈಸೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಕೊನೆಯ ಕಾರ್ಯಕ್ರಮವಾದ  ಪಂಜಿನ ಕವಾಯತಿಗೆ  ಬನ್ನಿಮಂಟಪದಲ್ಲಿ ರಾಜ್ಯಪಾಲ ವಾಜೂಭಾಯಿ ವಾಲಾ ಚಾಲನೆ ನೀಡಿದರು. 

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಚಿವರಾದ ಸಿ. ಟಿ. ರವಿ. ವಿ. ಸೋಮಣ್ಣ, ಶಾಸಕ ತನ್ವೀರ್ ಸೇಠ್ ಮತ್ತಿತರರು ಪಾಲ್ಗೊಂಡಿದ್ದರು. 

ಡೇರ್ ಡೆವಿಲ್ಸ್ ಮಿಲಿಟರಿ ತಂಡದವರು ನೀಡಿದ ಸಾಹಸ ಪ್ರದರ್ಶನ ಹಾಗೂ ದಿಶಾಂತ್ ಕಠಾರಿಯಾ ನೇತೃತ್ವದ 32 ಸದಸ್ಯರ ರಾಯಲ್ ಎನ್ ಫೀಲ್ಡ್ ಬೈಕ್ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು. 

ಒಂದೇ ಬೈಕಿನಲ್ಲಿ 10 ಜನರಿಂದ ಕಮಲ, ಕ್ರಿಸ್ ಮಸ್ ಟ್ರೀ ಆಕೃತಿ ನಿರ್ಮಿಸುವ ಮೂಲಕ ಗಮನ ಸೆಳೆದರು.ಬೆಂಕಿಯ ರಿಂಗ್ ನಲ್ಲಿ ನುಗ್ಗುವ ಬೈಕ್ ಸ್ಟಂಟ್ ನಿಬ್ಬೆರಗಾಗಿಸಿತು. ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೊರೆಗೊಳಿಸಿದವು.

ನಗರ ಸಶಸ್ತ್ರ ಪೊಲೀಸ್ ಪಡೆಯ 500 ಕ್ಕೂ ಹೆಚ್ಚು ಮಂದಿ ಪ್ರಸ್ತುತಪಡಿಸಿದ ಆಕರ್ಷಕ ಪಂಜಿನ ಕವಾಯತು ಕಲಾ ಪ್ರದರ್ಶನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

SCROLL FOR NEXT