ಸರಿಯಾದ ಬಟ್ಟೆ ಧರಿಸುವಂತೆ ವ್ಯಕ್ತಿಯ ಉಪದೇಶ 
ರಾಜ್ಯ

ಬೆಂಗಳೂರು: ತುಂಡುಡುಗೆ ತೊಟ್ಟ ಯುವತಿಗೆ ಅನಾಮಿಕ ವ್ಯಕ್ತಿಯಿಂದ ರಸ್ತೆಯಲ್ಲೇ ಕ್ಲಾಸ್; ವಿಡಿಯೋ ವೈರಲ್

ತುಂಡುಡುಗೆ ಧರಿಸಿದ್ದಕ್ಕೆ ವ್ಯಕ್ತಿಯೊಬ್ಬ ಯುವತಿಗೆ ನಿಂದಿಸುವ ಘಟನೆ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು: ತುಂಡುಡುಗೆ ಧರಿಸಿದ್ದಕ್ಕೆ ವ್ಯಕ್ತಿಯೊಬ್ಬ ಯುವತಿಗೆ ನಿಂದಿಸುವ ಘಟನೆ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಯುವತಿ ಗುರುವಾರ ರಾತ್ರಿ ತನ್ನ ಗೆಳೆಯನ ಜೊತೆ ಬೈಕಿನಲ್ಲಿ ಹೊರ ಹೋಗಿದ್ದಳು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಭಾರತೀಯ ಡ್ರೆಸ್ಸಿಂಗ್ ಕೋಡ್ ಪಾಲಿಸಲಿಲ್ಲ ಎಂದು ಯುವತಿಗೆ ನಿಂದಿಸಲು ಶುರು ಮಾಡಿದ್ದಾನೆ. 

ಸರಿಯಾದ ರೀತಿಯಲ್ಲಿ ಬಟ್ಟೆ ಧರಿಸಿ, ಭಾರತೀಯ ಸಂಸ್ಕೃತಿ ಪಾಲಿಸಿ ಎಂದು ಅನಾಮಿಕ  ವ್ಯಕ್ತಿಯೊಬ್ಬ ಯುವತಿಗೆ ಹೇಳಿದ್ದಾನೆ. ಇದನ್ನು ಯುವತಿಯ ಗೆಳೆಯ ವಿಡಿಯೋ ಮಾಡಿ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ಈ ವಿಡಿಯೋದಲ್ಲಿ ವ್ಯಕ್ತಿ ಹಾಗೂ ಯುವತಿಯ ಸ್ನೇಹಿತನ ನಡುವೆ ವಾಗ್ವಾದ ನಡೆದಿದೆ. ಅಲ್ಲದೆ ಆ ವ್ಯಕ್ತಿ ಭಾರತದ ನಿಯಮಗಳನ್ನು ಪಾಲಿಸು, ಭಾರತದ ಉಡುಗೆಗಳನ್ನು ಧರಿಸು ಎಂದು ವ್ಯಕ್ತಿ ವಿಡಿಯೋದಲ್ಲಿ ಪದೇ ಪದೇ ಹೇಳಿದ್ದಾನೆ. ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಪರ- ವಿರೋಧ ಚರ್ಚೆಯಾಗುತ್ತಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು, Video!

INS Mahendragiri: ಪ್ರಾಜೆಕ್ಟ್ 17A, ಕೇವಲ 18 ತಿಂಗಳಲ್ಲಿ 6ನೇ ಯುದ್ಧನೌಕೆ ನೌಕಾಪಡೆ ಸೇರ್ಪಡೆ, Video

ಸರ್ಕಾರ ಉರುಳಿಸಲು BJPಯಿಂದ ಕುದುರೆ ವ್ಯಾಪಾರ: ಒಬ್ಬ ಶಾಸಕನಿಗೆ ಬರೋಬ್ಬರಿ 20-30 ಕೋಟಿ ಆಫರ್: ಸಿಎಂ ಅಬ್ದುಲ್ಲಾ ಆರೋಪ

EDಯಿಂದ ಅನಿಲ್ ಅಂಬಾನಿಗೆ ಸೇರಿದ 1,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹೆಚ್ಚುವರಿ ಆಸ್ತಿಗಳ ಮುಟ್ಟುಗೋಲು!

ಮದುವೆಯಾದ ಎರಡು ದಿನಕ್ಕೇ ಕುಟುಂಬಸ್ಥರಿಂದಲೇ ನವವಿವಾಹಿತೆ ಕಿಡ್ನಾಪ್, Video ವೈರಲ್