ರಾಜ್ಯ

ಅವಕಾಶ ಸಿಕ್ಕಿದರೆ ಗೃಹಮಂತ್ರಿಗಳ ಸಲಹೆಗಾರನಾಗುವೆ: ಶಂಕರ್ ಬಿದರಿ

Vishwanath S

ಯಾದಗಿರಿ: ಸರ್ಕಾರದ ಯಾವುದೇ ಹುದ್ದೆಯ ಆಕಾಂಕ್ಷಿ ತಾವಲ್ಲ. ರಾಜಕೀಯ ಪ್ರವೇಶಿಸಿದ್ದೇ ಬದಲಾವಣೆ ತರಲು, ಅವಕಾಶ ಸಿಕ್ಕರೆ ಗೃಹಮಂತ್ರಿಗಳ ಸಲಹೆಗಾರನಾಗುವೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಗೆ ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ. ರಾಜ್ಯದ  ನೆರೆ ಪರಿಹಾರ ವಿಚಾರಕ್ಕೆ ಸಂಸದರು ಸ್ಪಂದಿಸಬೇಕಿತ್ತು. ಆದರೆ, ಸಂಸದರು ಪ್ರಧಾನಿಯನ್ನು ಭೇಟಿ ಮಾಡಿ ನೆರೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಕೇಂದ್ರ ಸರ್ಕಾರದಿಂದ 1200 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಪರಿಹಾರದ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸಣ್ಣಪುಟ್ಟ ದೋಷದ ಹಿನ್ನೆಲೆಯಲ್ಲಿ ಔರಾದ್ಕರ್ ವರದಿ ಜಾರಿಯಾಗಿಲ್ಲ. ನೆರೆ ಪರಿಹಾರದ ನಂತರ ವರದಿ ಜಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

SCROLL FOR NEXT