ರಾಜ್ಯ

ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ಮೇಲೆ ಆದಾಯ ತೆರಿಗೆ ದಾಳಿ: 100 ಕೋಟಿ ಅಕ್ರಮ ಆಸ್ತಿ ಪತ್ತೆ

Srinivasamurthy VN

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ರಾಜ್ಯದ ಪ್ರಮುಖ ವ್ಯಾಪಾರ ಸಮೂಹವೊಂದರ ಮೇಲೆ 2019ರ ಅಕ್ಟೋಬರ್ 9 ರಂದು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆಯಲ್ಲಿ ತೆರಿಗೆ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ.

ಎಂಸಿಸಿಯ ಕೌನ್ಸೆಲಿಂಗ್ ಮೂಲಕ ಅರ್ಹತೆಯಿಂದ ಮೂಲತಃ ಹಂಚಿಕೆ ಮಾಡಬೇಕಾದ ಸೀಟುಗಳನ್ನು ಅಕ್ರಮವಾಗಿ ಸಾಂಸ್ಥಿಕ ಕೋಟಾ ಸೀಟುಗಳಾಗಿ ಪರಿವರ್ತಿಸಿರುವುದು ಪತ್ತೆಯಾಗಿದೆ. ಸೀಟುಗಳ ಪರಿವರ್ತನೆ, ದಲ್ಲಾಳಿಗಳಿಗೆ ಕಮಿಷನ್ ಪಾವತಿ ಮತ್ತು ನಗದು ಸ್ವೀಕೃತಿಯ ವಿನಿಮಯದಲ್ಲಿ ಸೀಟುಗಳ ಮಾರಾಟದಲ್ಲಿ ದೋಷಾರೋಪಣೆಯ ಪುರಾವೆಗಳು ಕಂಡುಬಂದಿವೆ. ಎಂಬಿಬಿಎಸ್ ಮತ್ತು ಪಿಜಿ ಸೀಟುಗಳ ಪರಿವರ್ತನೆಗಾಗಿ ಬಹು ಏಜೆಂಟರ ಬಳಕೆಯ ಪುರಾವೆಗಳು ಸಹ ಕಂಡುಬಂದಿವೆ.

ಕಾಂಗ್ರೆಸ್ ನಾಯಕ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒಡೆತನದ ವಿದ್ಯಾಸಂಸ್ಥೆಗಳ ಮೇಲೆ ಹಾಗೂ ಮಾಜಿ ಸಂಸದ ಆರ್. ಜಾಲಪ್ಪ ಮಗನ ಮನೆ ಮೇಲೂ ದಾಳಿ ನಡೆಸಿದ್ದರು. ದಾಳಿ ಸಂಬಂಧಿಸಿದಂತೆ ಇಂದು ಆದಾಯ ತೆರಿಗೆ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಅಕ್ಟೋಬರ್ 9ರಂದು ಡಾ.ಜಿ.ಪರಮೇಶ್ವರ್ ಒಡೆತನದ ಬೃಹತ್ ಶಿಕ್ಷಣ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದೆ. ಸೀಟು ಹಂಚಿಕೆ ವಿಚಾರದಲ್ಲಿ ಅಕ್ರಮ ಹಣ ಸಂಪಾದನೆ‌ ಕಾರಣ ದಾಳಿ ನಡೆಸಲಾಗಿದೆ. ಒಟ್ಟು ₹4.22 ಕೋಟಿ ನಗದು ಪತ್ತೆಯಾಗಿದೆ ಅಂತಾ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ಮೆರಿಟ್​ ಆಧಾರದಲ್ಲಿ ಹಂಚಿಕೆ ಆಗಬೇಕಿದ್ದ ಹಲವಾರು ಸರ್ಕಾರಿ ಕೋಟಾ ಸೀಟುಗಳನ್ನ ಅಕ್ರಮವಾಗಿ ವಿದ್ಯಾರ್ಥಿಗಳಿಂದ ಡ್ರಾಪ್​​ ಔಟ್​ ಪದ್ಧತಿ ಮೂಲಕ ತಪ್ಪಿಸಿ ಅವುಗಳನ್ನು ಪ್ರೈವೇಟ್​ ಇನ್​​ಸ್ಟಿಟ್ಯೂಟ್​ಗಳ ಕೋಟಾ ಸೀಟುಗಳಾಗಿ ಮಾರ್ಪಡಿಸಲಾಗುತ್ತಿದ್ದುದು ಬೆಳಕಿಗೆ ಬಂದಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ಐಟಿ ಅಧಿಕಾರಿಗಳ ನೀಡಿರುವ ಮಾಹಿತಿಯ ಮುಖ್ಯಾಂಶಗಳು ಇಂತಿವೆ.
ಸೀಟ್​ ಬದಲೀಕರಣ ನಡೆಸಿರೋದಕ್ಕೆ ಸಾಕ್ಷ್ಯಗಳು ಲಭ್ಯ
ದಾಖಲೆ ಇಲ್ಲದ ಬರೋಬ್ಬರಿ ರೂ4.22 ಕೋಟಿ ನಗದು ಪತ್ತೆ
ರಿಯಲ್ ಎಸ್ಟೇಟ್​ನಲ್ಲಿ ರೂ100 ಕೋಟಿ ಅಘೋಷಿತ ಆದಾಯ ಪತ್ತೆ
ಜೊತೆಗೆ ರೂ8.82 ಕೋಟಿ ಮೊತ್ತದ ಅಘೋಷಿತ ಆಸ್ತಿ ಪತ್ತೆ
ಪರಮೇಶ್ವರ್​ ಮನೆಯಲ್ಲಿ ರೂ89 ಲಕ್ಷ ನಗದು ಹಣ ಪತ್ತೆ
185 ಮೆಡಿಕಲ್​ ಸೀಟ್​ಗಳ ಮಾರಾಟದಿಂದ ಹಣ ಗಳಿಸಿರುವುದು ಗೊತ್ತಾಗಿದೆ
8 ಜನ ಕೆಲಸಗಾರರ ಹೆಸರಲ್ಲಿ ರೂ4.25 ಕೋಟಿ ಹಣ ವರ್ಗಾವಣೆ
8 ಜನ ಕೆಲಸಗಾರರ ಹೆಸರಲ್ಲಿ ರೂ4.6 ಕೋಟಿ ಎಫ್​ಡಿ ಪತ್ತೆ
ಶಿಕ್ಷಣ ಸಂಸ್ಥೆ ಸಿಬ್ಬಂದಿ ಹೆಸರಲ್ಲಿ ಒಟ್ಟು 8 ಕಾನೂನುಬಾಹೀರ ಬ್ಯಾಂಕ್ ಖಾತೆಗಳು ಓಪನ್
ನಗದು ಹಣವನ್ನ ಈ ಅಕೌಂಟ್​​ಗೆ ಟ್ರಾನ್ಸ್​ಫರ್ ಮಾಡಿಸಿಕೊಳ್ಳಲಾಗುತ್ತಿತ್ತು
ಹವಾಲಾ ಮೂಲಕ ಹಣ ವರ್ಗಾವಣೆ ಸಂಶಯ ವ್ಯಕ್ತಪಡಿಸಿರುವ ಅಧಿಕಾರಿಗಳು
ರಿಯಲ್​​ ಎಸ್ಟೇಟ್​ನಲ್ಲಿ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿರೋದು ಪತ್ತೆ
ಕಾಲೇಜಿನ ಒಂದು ಸೀಟ್​ಗೆ ರೂ50 ಲಕ್ಷದಿಂದ ರೂ65 ಲಕ್ಷದವರೆಗೂ ಹಣ ಪಡೆಯಲಾಗಿದೆ.

SCROLL FOR NEXT