ರಾಜ್ಯ

ಸೋಲಿಗರ ಸಹಾಯ: ಕೊನೆಗೂ ನರಹಂತಕ ಹುಲಿ ಜೀವಂತ ಸೆರೆ!

Vishwanath S

ಚಾಮರಾಜನಗರ: ಐದು ದಿನಗಳ ನಿರಂತರ ಕಾರ್ಯಾಚರಣೆ ಕೊನೆಗೂ ಸೋಲಿಗರ ನೆರವಿನಿಂದ ಹುಲಿಯ ಆವಾಸಸ್ಥಾನವನ್ನು ಪತ್ತೆ ಹಚ್ಚಿದ ಅರಣ್ಯಾಧಿಕಾರಿಗಳು ಹುಲಿಗೆ ಅರವಳಿಕೆ ಮದ್ದು ಚುಚ್ಚಿ ಜೀವಂತವಾಗಿ ಸೆರೆ ಹಿಡಿದಿದ್ದಾರೆ. 

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಿಂಜಿನ ಗ್ರಾಮಸ್ಥರಲ್ಲಿ ಈ ನರಹಂತಕ ಹುಲಿ ಆತಂಕ ಮೂಡಿಸಿತ್ತು. ಹುಲಿಯನ್ನು ಸೆರೆ ಹಿಡಿಯುವ ಒತ್ತಡ ಹೆಚ್ಚಿತ್ತು. ಹೀಗಾಗಿ ತಕ್ಷಣವೇ ಅಭಿಮನ್ಯು, ಜಯಪ್ರಕಾಶ್ ಗೋಪಾಲಸ್ವಾಮಿ ನೇತೃತ್ವದ ಸಾಕಾಣೆ ಆನೆ ತಂಡಗಳ ಸಹಾಯದಿಂದ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿದಿದ್ದಾರೆ. 

ಹುಲಿಯ ಇರುವಿಕೆಯನ್ನು ಪತ್ತೆ ಹಚ್ಚಿದ ನಂತರ ಪ್ರದೇಶವನ್ನು ಸುತ್ತುವರೆದ ಅರಣ್ಯಾಧಿಕಾರಿಗಳು ಮತ್ತು ವೈದ್ಯರು ಹುಲಿಗೆ ಅರವಳಿಕೆ ಚುಚ್ಚು ಮದ್ದು ಹೊಡೆದರು. ಸೂಜಿ ಚುಚ್ಚಿಕೊಂಡರು ಹುಲಿ ಮಾತ್ರ ಬೇಗನೆ ನಿತ್ರಾಣಗೊಂಡಿಲ್ಲ. ಹೀಗಾಗಿ ಹುಲಿಯನ್ನು ಅರಣ್ಯಾಧಿಕಾರಿಗಳು ಬೆನ್ನಟ್ಟಿದ್ದರು. ನಂತರ ಪೊದೆಯೊಳಗೆ ಅಡಗಿ ಕುಳಿತಿತ್ತು. ರಾಣಾ ಹೆಸರಿನ ನಾಯಿ ಸಹಾಯದಿಂದ ಹುಲಿ ಅಡಗಿದ್ದನ್ನು ತಿಳಿದ ಅಧಿಕಾರಿಗಳು ಕೊನೆಗೆ ಹುಲಿಯನ್ನು ಸೆರೆಹಿಡಿದ್ದಾರೆ.

SCROLL FOR NEXT