ರಾಹುಲ್ ಗಾಂಧಿ 
ರಾಜ್ಯ

ಎಐಸಿಸಿ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದರೂ ಆನ್ ಲೈನ್ ನಲ್ಲಿ ಕಮ್ಮಿಯಾಗಿಲ್ಲ ರಾಹುಲ್ ಗಾಂಧಿ ಹವಾ! 

ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಮೂರು ತಿಂಗಳು ಕಳೆದರೂ ರಾಹುಲ್ ಗಾಂಧಿ ಪ್ರಾಬಲ್ಯ ಮಾತ್ರ ಇನ್ನೂ ಕಮ್ಮಿಯಾಗಿಲ್ಲ,  ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಗಾಂಧಿ ತಮ್ಮ ಹವಾ ಉಳಿಸಿಕೊಂಡಿದ್ದಾರೆ.

ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಮೂರು ತಿಂಗಳು ಕಳೆದರೂ ರಾಹುಲ್ ಗಾಂಧಿ ಪ್ರಾಬಲ್ಯ ಮಾತ್ರ ಇನ್ನೂ ಕಮ್ಮಿಯಾಗಿಲ್ಲ,  ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಗಾಂಧಿ ತಮ್ಮ ಹವಾ ಉಳಿಸಿಕೊಂಡಿದ್ದಾರೆ.

ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರೂ ಕರ್ನಾಟಕ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ತಮ್ಮ ಪ್ರೊಫೈಲ್ ಪಿಕ್ಚರ್ ಆಗಿ ಬಳಸಿಕೊಳ್ಳುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹಿರಿಯ ಮುಖಂಡ ಎಚ್ ಕೆ ಪಾಟೀಲ್, ಅವರುಗಳು ತಮ್ಮ ಟ್ವಿಟ್ಟರ್ ಕವರ್ ಪೇಜ್ ನಲ್ಲಿ  ರಾಹುಲ್ ಗಾಂಧಿ ಫೋಟೋ ಹಾಕಿಕೊಂಡಿದ್ದಾರೆ, ತಮ್ಮ ಫೋಟೋ ಅಥವಾ ಕಾಂಗ್ರೆಸ್ ಪಕ್ಷದ ಲೋಗೋ ಬದಲು ರಾಹುಲ್ ಗೆ ಮಣೆ ಹಾಕಿದ್ದಾರೆ.

ಮಾಜಿ ಸಚಿವ ಡಿಕೆ ಶಿವಕುಮಾರ್ ಮತ್ತು ಮಾಜಿ ಡಿಸಿಎಂ ಪರಮೇಶ್ವರ್  ರಾಹುಲ್ ಗಾಂಧಿ ಒಟ್ಟಿಗಿರುವ ಫೋಟೋ ಹಾಕಿಕೊಂಡಿದ್ದಾರೆ.  ಈಶ್ವರ ಖಂಡ್ರೆ ಕೂಡ ರಾಹುಲ್ ಜೊತೆಗಿರುವ ಫೋಟೋ ಅಪ್ ಲೋಡ್ ಮಾಡಿದ್ದಾರೆ.

ಇನ್ನೂ ಹಿರಿಯ ಕಾಂಗ್ರೆಸ್ ನಾಯಕರುಗಳಾದ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು, ತಮ್ಮ ಅಧಿಕೃತ ಪೇಜ್ ನಲ್ಲಿ  ಕಾಂಗ್ರೆಸ್ ಪಕ್ಷದ ಲೋಗೋ ಹಾಕಿಕೊಂಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ನಲ್ಲಿ ಸೋನಿಯಾಗಾಂಧಿ ಫೋಟೋ ಇದೆ.

ರಾಹುಲ್ ಗಾಂಧಿ ಯಶಸ್ವಿ ನಾಯಕನಾಗದಿದ್ದರೂ ಕಾಂಗ್ರೆಸ್ ಮುಖಂಡರಿಗೆ ಅವರ ಮೇಲಿರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ,  ರಾಹುಲ್ ತಮ್ಮ ನಾಯಕನಾಗಿ ಮುಂದುವರಿಯಬೇಕು ಎಂಬುದು ಹಲವರ ಬಯಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!