ರಾಜ್ಯ

ಅಯೋಧ್ಯೆ ಶ್ರೀರಾಮನ ಜನ್ಮಭೂಮಿ ಎಂಬುದಕ್ಕೆ ಸಾಕ್ಷಿಯ ಅಗತ್ಯವಿಲ್ಲ: ಸಚಿವ ಸಿ ಟಿ ರವಿ 

Sumana Upadhyaya

ಬೆಂಗಳೂರು: ಅಯೋಧ್ಯೆಯ ವಿವಾದಿತ ಸ್ಥಳ ಶ್ರೀರಾಮನ ಜನ್ಮಭೂಮಿಯಾಗಿದ್ದು ಇದಕ್ಕೆ ಯಾವುದೇ ಸಾಕ್ಷಿಯ ಅಗತ್ಯವಿಲ್ಲ, ಸುಪ್ರೀಂ ಕೋರ್ಟ್ ನಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವ ಬಿಜೆಪಿ ನಾಯಕ ಸಿ ಟಿ ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಡೀ ದೇಶ ಸುಪ್ರೀಂ ಕೋರ್ಟ್ ನ ತೀರ್ಪಿಗೆ ಕಾಯುತ್ತಿದೆ. ನಾನು ಕೂಡ ಕಾತರನಾಗಿದ್ದೇನೆ. ವಿವಾದಿತ ಪ್ರದೇಶ ಶ್ರೀರಾಮನ ಜನ್ಮಭೂಮಿ ಎಂಬ ಭಾವನೆ ನಮ್ಮೆಲ್ಲರಲ್ಲೂ ಇದೆ. ಇದಕ್ಕೆ ಬೇರೆ ಯಾವುದೇ ಸಾಕ್ಷಿಯ ಅಗತ್ಯವಿಲ್ಲ, ಸಾವಿರಾರು ವರ್ಷಗಳಿಂದ ಅದೇ ನಂಬಿಕೆಯಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು.


ರಾಜಕೀಯವಾಗಿ ಸೂಕ್ಷ್ಮ ಪ್ರಕರಣವಾಗಿರುವ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಬಗ್ಗೆ ಸುಪ್ರೀಂ ಕೋರ್ಟ್ ನಿನ್ನೆ ವಿಚಾರಣೆ ಮುಗಿಸಿದ್ದು ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.

SCROLL FOR NEXT