ರಾಜ್ಯ

ಗಂಗಾವತಿ: ಗಾಂಧಿ ಪುರಸ್ಕಾರ ಪಡೆದ ಗ್ರಾಮದಲ್ಲಿ ಡೆಂಗಿಗೆ ಬಾಲಕ ಬಲಿ

Srinivasamurthy VN

ಗಂಗಾವತಿ: ಸ್ವಚ್ಚತೆ ನೈರ್ಮಲ್ಯ ನಿರ್ವಹಣೆಗಾಗಿ ಇತ್ತೀಚೆಗಷ್ಟೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ತಾಲ್ಲೂಕಿನ ಶ್ರೀರಾಮನಗರದಲ್ಲಿ ಬಾಲಕನೊಬ್ಬ ಡೆಂಗಿ ಜ್ವರಕ್ಕೆ ಸಾವನ್ನಪ್ಪಿದ್ದಾನೆ. 

ಗ್ರಾಮದ ಎರಡನೇ ವಾರ್ಡಿನ ಇಮ್ತಿಯಾಜ್, ಅಬ್ದುಲ್ ಖಾದರ್ ಜಿಲಾನ್ (12) ಮೃತ ಬಾಲಕ. ಬಾಲಕನಿಗೆ ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಡೆಂಗ್ಯೂ ಎಂದು ವೈದ್ಯಕೀಯ ತಪಾಸಣೆಗಳು ದೃಢಪಡಿಸಿವೆ. 
ಜ್ವರಕಾಣಿಸಿಕೊಂಡ ಬೆನ್ನಲ್ಲೆ ಬಾಲಕನ ದೇಹದೊಳಗೆ ಪ್ಲೇಟ್ಲೆಟ್ ಕೌಂಟ್ ಗಣನೀಯ ಪ್ರಮಾದಲ್ಲಿ ಕುಸಿತವಾಗಿದೆ‌ ಹೀಗಾಗಿ ಬಾಲಕನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸಿದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೆ ಗ್ರಾಮ ಗಾಂಧಿ ಪುರಸ್ಕಾರ ಪಡೆದುಕೊಂಡಿತ್ತು. ಆದರೆ ಗ್ರಾಮದಲ್ಲಿ ಅಸ್ವಚ್ಚತೆ, ತಿಪ್ಪೆಗುಂಡಿಗಳು ಸಂಗ್ರಹವಾಗಿ ಸೊಳ್ಳೆ ಹರಡಲು ಕಾರಣವಾಗಿದೆ ಎಂದು ಸ್ಥಳಿಯರು ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

- ಶ್ರೀನಿವಾಸ್ ಎಂ ಜೆ

SCROLL FOR NEXT