ಸಾಂದರ್ಭಿಕ ಚಿತ್ರ 
ರಾಜ್ಯ

ಪೀಣ್ಯ: ರ್ಯಾಂಪ್ ವಾಕ್ ​ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

ಕಾಲೇಜಿನ ವೇದಿಕೆಯ ಮೇಲೆ ರ‍್ಯಾಂಪ್ ವಾಕ್​ ಪ್ರಾಕ್ಟೀಸ್  ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದ ಪೀಣ್ಯ ಏಮ್ಸ್​ ಕಾಲೇಜಿನಲ್ಲಿ ಶುಕ್ರವಾರ ನಡೆದಿದ್ದು, ಶನಿವಾರ ವರದಿಯಾಗಿದೆ.

ಬೆಂಗಳೂರು: ಕಾಲೇಜಿನ ವೇದಿಕೆಯ ಮೇಲೆ ರ‍್ಯಾಂಪ್ ವಾಕ್​ ಪ್ರಾಕ್ಟೀಸ್  ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದ ಪೀಣ್ಯ ಏಮ್ಸ್​ ಕಾಲೇಜಿನಲ್ಲಿ ಶುಕ್ರವಾರ ನಡೆದಿದ್ದು, ಶನಿವಾರ ವರದಿಯಾಗಿದೆ.

21 ವರ್ಷದ ಶಾಲಿನಿ ಮೃತ ದುರ್ದೈವಿ. ಶಾಲಿನಿ ಏಮ್ಸ್ ಕಾಲೇಜ್​ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿನಲ್ಲಿ ನಡೆಯಬೇಕಿದ್ದ ಫ್ರೆಶರ್ಸ್​ ಡೇ ಗಾಗಿ ರ‍್ಯಾಂಪ್ ವಾಕ್​ ಅಭ್ಯಾಸ ಮಾಡುತ್ತಿದ್ದ ವೇಳೆ ಶುಕ್ರವಾರ ಸಂಜೆ ವೇದಿಕೆಯ ಮೇಲೆ ಕುಸಿದುಬಿದ್ದಿದ್ದಾಳೆ. 

ತಕ್ಷಣವೇ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತ್ತಾದ್ದರೂ, ತಪಾಸಣೆ ನಡೆಸಿದ ವೈದ್ಯರು ಶಾಲಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜುಲೈ 20 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ಎಂದ Kiren Rijiju, ವಿಪಕ್ಷಗಳ 'ಬಂಡಾಯ' ಪ್ರತಿಧ್ವನಿಸುವ ಸಾಧ್ಯತೆ!

70 ಲಕ್ಷ ಪಡೆದು ಉದ್ಯಮಿಗೆ ವಂಚನೆ; ರೇಪ್‌ ಕೇಸ್‌ ಬೆದರಿಕೆ, ಪೆನ್‌ಡ್ರೈವ್‌ ನಲ್ಲಿ ಅಶ್ಲೀಲ ವಿಡಿಯೋ ಪತ್ತೆ: ಮುಸ್ಲಿಂ ಮಹಿಳೆಯ ಬಂಧನ

ಬಲೂಚಿಗರಿಂದ ಆತ್ಮಾಹುತಿ ದಾಳಿ: 30ಕ್ಕೂ ಹೆಚ್ಚು Pakistan ಸೈನಿಕರು ಸಾವು, ಸ್ಫೋಟದ ವಿಡಿಯೋ ಬಿಡುಗಡೆ ಮಾಡಿದ BLA

2nd T20I: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಕೊನೆಗೂ Vaibhav Sooryavanshi ಪದಾರ್ಪಣೆ, ಸಚಿನ್ ದಾಖಲೆ ಧ್ವಂಸ!

ಇದು ನಿಜಕ್ಕೂ 'ಅಸಹ್ಯಕರ'; ಹೀಗೆ ಆಗುತ್ತಿರುವುದು ಮೂರನೇ ಬಾರಿ: ಆಕ್ರೋಶ ಹೊರಹಾಕಿದ ನಟಿ ತ್ರಿಶಾ!