ರಾಜ್ಯ

ಎರಡೇ ತಿಂಗಳಲ್ಲಿ ನಾಲ್ಕು ಬಾರಿ ಮುಳುಗಡೆಯಾದ ಹಂಪಿಯ ಪುರಂದರ ಮಂಟಪ

Lingaraj Badiger

ಬಳ್ಳಾರಿ: ಹಂಪಿಯ ಪುರಂದರ ಮಂಟಪದ ಅದೃಷ್ಟನೋ ಏನು ಈ ವರ್ಷ ಕಳೆದ ಎರಡು ತಿಂಗಳಲ್ಲಿ ನಾಲ್ಕು ಬಾರಿ ಮುಳುಗಡೆಯಾಗಿದೆ.

ಜನ ಸಾಮಾನ್ಯರ ಅಭಿಪ್ರಾಯದ ಪ್ರಕಾರ ತುಂಗಭದ್ರ ಜಲಾಶಯ ನಿರ್ಮಾಣ ಆದಾಗಿನಿಂದ ಇದುವರೆಗೆ ಈ ರೀತಿಯಾಗಿ ಎರಡು ತಿಂಗಳಿನಲ್ಲಿ ನಾಲ್ಕು ಬಾರಿ ಮುಳುಗಡೆಯಾಗಿದ್ದು ಇದೇ ಮೊದಲು ಎನ್ನುತ್ತಿದ್ದಾರೆ.

ಅಂದಹಾಗೆ ಈ ಬಾರಿ ತುಂಗಭದ್ರ ಜಲಾಶಯದಿಂದ ಬಾರಿ ಪ್ರಮಾಣದ ನೀರು ನದಿಗೇನು ಹರಿ ಬಿಟ್ಟಿಲ್ಲ. ಹಾಗಿದ್ದರೂ ಪುರಂದರ ಮಂಟಪ ಮುಳುಗಡೆಯಾಗಿದೆ. ಅದಕ್ಕೆ ಕಾರಣ ನಿನ್ನೆ ರಾತ್ರಿ ಹೊಸಪೇಟೆ ಸುತ್ತ ಮುತ್ತ ಸುಮಾರು ನಾಲ್ಕು ಗಂಟೆಗಳ ಕಾಲ ಸುರಿದ ಭಾರಿ ಮಳೆ. 

ಮಂಟಪ ಇಷ್ಟೊಂದು ಮುಳುಗಡೆ ಆಗಬೇಕಾದರೆ ತುಂಗಭದ್ರ ಜಲಾಶಯದಿಂದ ಸುಮಾರು ಒಂದು ಲಕ್ಷ ಕ್ಯೂಸೆಸ್ ನೀರು ನದಿಗೆ ಹರಿ ಬಿಡಬೇಕು. ಆದ್ರೆ ಇಂದು ನದಿಗೆ ಹರಿ ಬಿಟ್ಟಿರುವುದು ಕೇವಲ ಹತ್ತರಿಂದ ಹದಿನೈದು ಸಾವಿರ ಕ್ಯೂಸೆಸ್ ನೀರು ಮಾತ್ರ. ಅದಲ್ಲದೆ ತುಂಗಭದ್ರ ಜಲಾಶಯದಿಂದ ನಿರಂತರವಾಗಿ ಹತ್ತರಿಂದ ಹದಿನೈದು ಸಾವಿರ ಕ್ಯೂಸೆಸ್ ನೀರನ್ನ ಜಲಾಶದಿಂದ ನದಿಗೆ ಹರಿಬಿಡಲಾಗುತ್ತಿದೆ.

ಈಗಾಗಲೇ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಎಷ್ಟು ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬರುತ್ತಿದೆಯೋ ಅಷ್ಟು ಪ್ರಮಾಣದ ನೀರನ್ನ ನದಿಗೆ ಹರಿ ಬಿಟ್ಟು ತುಂಬಿರುವ ಜಲಾಶಯದ ನೀರಿನ ಪ್ರಮಾಣವನ್ನ ಮಾತ್ರ ಟಿ.ಬಿ.ಬೋರ್ಡ್ ಅಧಿಕಾರಿಗಳು ಕಡಿಮೆಮಾಡಿಲ್ಲ. 

ಒಟ್ಟಿನಲ್ಲಿ ಜಲಾಶಯ ಅವಲಂಬಿತ ರೈತರ ಜಮೀನಿಗೆ ಈ ಬಾರಿ ಎರಡನೇ ಬೆಳೆ ಬೆಳೆಯಲು ನೀರು ಸಿಗುವುದರಲ್ಲಿ ಅನುಮಾನವೇ ಇಲ್ಲ.

SCROLL FOR NEXT