ಸಂಗ್ರಹ ಚಿತ್ರ 
ರಾಜ್ಯ

ಔರಾದ್ಕರ್ ವರದಿ ಜಾರಿ: ಪೊಲೀಸರ ವೇತನ ಪರಿಷ್ಕರಣೆ, ಯಾವ ಹುದ್ದೆಗೆ ಎಷ್ಟು ವೇತನ ಇಲ್ಲಿದೆ ಮಾಹಿತಿ

ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆಯಾದ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಆದೇಶದ ಅನ್ವಯ ಪೊಲೀಸರ ವೇತನ ಪಟ್ಟಿ ವಿವರ ಇಲ್ಲಿದೆ.

ಬೆಂಗಳೂರು: ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆಯಾದ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಆದೇಶದ ಅನ್ವಯ ಪೊಲೀಸರ ವೇತನ ಪಟ್ಟಿ ವಿವರ ಇಲ್ಲಿದೆ.

2016 ರ ಜೂನ್​ 21ರಂದು ಔರಾದ್ಕರ್ ಸಮಿತಿ ರಚನೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಔರಾದ್ಕರ್ ವರದಿಗೆ ಮೈತ್ರಿ ಸರ್ಕಾರ ಅಂಕಿತ ಹಾಕಿ, ಆಗಸ್ಟ್​ 1ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಮುಂದಿನ ಆದೇಶ ಬರುವವರೆಗೆ ಕಾಯುವಂತೆ ಎಡಿಜಿಪಿ ಸೂಚಿಸಿದ್ದರು.

ಸದ್ಯ ವರದಿ ಶಿಫಾರಸ್ಸಿನಂತೆ ವೇತನವನ್ನು ಉನ್ನತೀಕರಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಈ ಆದೇಶ 2019ರ ಆಗಸ್ಟ್​ 1 ರಿಂದಲೇ ಜಾರಿಯಾಗಿದೆ.

ಪರಿಷ್ಕೃತ ಮೂಲ ವೇತನ ವಿವರ

  • ಪೊಲೀಸ್ ಕಾನ್ಸ್​ಟೇಬಲ್ - ರಿಸರ್ವ್ ಕಾನ್ಸ್​ಟೇಬಲ್ - 23,500 ದಿಂದ 47,650
  • ಹೆಡ್ ಕಾನ್ಸ್​ಟೇಬಲ್ - 27,650 ದಿಂದ 52,650
  • ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ - 30,350 ದಿಂದ 58,250
  • ಇನ್ಸ್​ಪೆಕ್ಟರ್ - 43,100 ದಿಂದ 83,900
  • ಎಸ್​ಪಿ( ಐಪಿಎಸ್ ಹೊರತುಪಡಿಸಿ)-70,850 ದಿಂದ 1,07,100

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT