ರಾಜ್ಯ

ಮಾಹಿತಿ ಆಯೋಗದಲ್ಲಿ ಮುಸುಕಿನ ಗುದ್ದಾಟ: ಮುಖ್ಯ ಮಾಹಿತಿ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ದೂರು

Manjula VN

ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಹಾಗೂ ಇತರೆ ಮಾಹಿತಿ ಆಯುಕ್ತರ ನಡುವೆ ಶೀತಲ ಸಮರ ತಾರಕಕ್ಕೇರಿದ್ದು, ಮುಖ್ಯ ಆಯುಕ್ತರ ವಿರುದ್ಧ ಇತರೆ ಆಯುಕ್ತರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. 

ಆಯೋಗದ ಎಲ್ಲಾ 9 ಮಂದಿ ಆಯುಕ್ತರು, ಮುಖ್ಯ ಆಯುಕ್ತ ಎನ್.ಸಿ.ಶ್ರೀನಿವಾಸ್ ಅವರ ವಿರುದ್ಧ ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ದೂರು ಸಲ್ಲಿಸಿದ್ದು, ತನಿಖೆಗೆ ಆದೇಶಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 

ಮುಖ್ಯ ಆಯುಕ್ತ ಎನ್.ಸಿ.ಶ್ರೀನಿವಾಸ್ ಅಸಮರ್ಥರಾಗಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಅನಗತ್ಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ 2005 ಸೆಕ್ಷನ್ 17ರ ಅಡಿ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. 

ಶ್ರೀನಿವಾಸ್ ಅವರು ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಅಧಿಕಾರಕ್ಕೆ ಬಂದಾಗಿನಿಂದಲೂ ಆಯೋಗದ ಕಾರ್ಯಗಳು ಕಾಯ್ದೆ, ನಿಬಂದನೆಗಳ ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ್ ಅವರು, ಇವೆಲ್ಲಾ ಸುಳ್ಳು ಆರೋಪಗಳು. ಯಾವುದೇ ಅಧಿಕಾರಿಯೊಂದಿಗೂ ನಾನು ತಪ್ಪಾಗಿ ನಡೆದುಕೊಂಡಿಲ್ಲ. ಪ್ರತೀಯೊಬ್ಬರನ್ನು ಗೌರವದಿಂದಲೇ ನೋಡುತ್ತೇನೆ. ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ. 

ನಾನು ತಪ್ಪಾಗಿ ನಡೆದುಕೊಂಡಿದ್ದೇನೆಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದಾದರೂ ಘಟನೆಯನ್ನು ತಿಳಿಸಿ. ನಾನು ಯಾವಾದ ತಪ್ಪಾಗಿ ನಡೆದುಕೊಂಡಿದ್ದೆ? ಎಲ್ಲಿ ಹಾಗೂ ಯಾವ ಸಂದರ್ಭದಲ್ಲಿ ನಡೆದುಕೊಂಡೆ? ನನ್ನ ಗೌರವಕ್ಕೆ ಧಕ್ಕೆಯುಂಟು ಮಾಡಲು ಪೂರ್ವ ನಿಯೋಜಿತ ಆರೋಪವಿದು ಎಂದಿದ್ದಾರೆ. 

SCROLL FOR NEXT