ರಾಜ್ಯ

ಕರ್ನಾಟಕ, ಕೇರಳದಲ್ಲಿ ಭಾರೀ ಮಳೆ: ಹಳದಿ ಆಲರ್ಟ್ ಘೋಷಣೆ!

Nagaraja AB

ಬೆಂಗಳೂರು: ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಈಶಾನ್ಯ ಮುಂಗಾರು ಚುರುಕುಗೊಂಡಿದ್ದು, ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ  ಹಳದಿ ಆಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ, ಸೂಕ್ತ  ಕ್ರಮ ಕೈಗೊಳ್ಳುವಂತೆ ರಾಜ್ಯಗಳ ಆಡಳಿತಕ್ಕೆ ನಿರ್ದೇಶನ  ನೀಡಿದೆ. 

ಹವಾಮಾನ ವೈಫರೀತ್ಯದಿಂದ ಎದುರಾಗುವ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಸೂಕ್ತ ರೀತಿಯಲ್ಲಿ ಸಿದ್ಧರಾಗಿರುವಂತೆ ಭಾರತೀಯ ಹವಾಮಾನ ಇಲಾಖೆ ಹಳದಿ ಆಲರ್ಟ್ ಘೋಷಿಸಿದೆ. 

ಬೆಳಗಾವಿ ಜಿಲ್ಲೆಯ  ಗೋಕಾಕ್ ಬಳಿಯ  ಘಟಪ್ರಭಾ ನದಿ ಇಂದು ಬೆಳಗ್ಗೆ 542 ಮೀಟರ್ ನಷ್ಟು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನವಲಗುಂದ ಬಳಿಯ ಕೃಷ್ಣೆ 564 ಮೀಟರ್ ತುಂಬಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 

ಕೇರಳದಲ್ಲಿನ ಪಂಬಾ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೊಲ್ಲಂ, ಅಲಾಪ್ಪುಝಾ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಡ್, ಮಲ್ಲಾಪುರಂ, ಕೊಝಿಕೊಡು, ವೈನಾಡು , ಕಣ್ಣೂರು ಹಾಗೂ ಕಾಸರಗೋಡು ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆಲರ್ಟ್ ಘೋಷಿಸಿದೆ. 

SCROLL FOR NEXT