ರಾಜ್ಯ

ಬೆಂಗಳೂರು: ಎಚ್‌ಎಎಲ್ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ

Raghavendra Adiga

ಬೆಂಗಳೂರು: ನಗರದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಎಚ್‌ಎಎಲ್ ನೌಕರರ ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಮುಷ್ಕರವನ್ನು ಪ್ರಶ್ನಿಸಿ ಎಚ್‌ಎಎಲ್ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್  ಅವರಿದ್ದ ಪೀಠ ಮುಷ್ಕರವನ್ನು ಮುಂದುವರಿಸದಂತೆ ನೌಕರರಿಗೆ ಮಧ್ಯಂತರ ತಡೆ  ಆದೇಶವನ್ನು ಜಾರಿಗೊಳಿಸಿದೆ.

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಎಂಪ್ಲಾಯೀಸ್‌ ಅಸೋಸಿಯೇಷನ್‌,ಪದಾಧಿಕಾರಿಗಳು ಃಆಗೂ ನೌಕರರು ಮುಷ್ಕರ ನಿಲ್ಲಿಸಬೇಕು. ಕಚೇರಿಯ ದೈನಂದಿನ ಕಾರ್ಯಚಟುವಟಿಕೆಗೆ ಭಂಗವಾಗುವ ಯಾವುದೇ ಪ್ರತಿಭಟನೆ ನಡೆಸಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ಅದಾಗ್ಯೂ ಈ ಸಮಸ್ಯೆ ಪರಿಹಾರಕ್ಕೆ ರಾಜಿ ಸಂಧಾನ ಕ್ರಮ ಮುಂದುವರಿಸುವಂತೆ  ಮತ್ತು ವಿವಾದದ ಇತ್ಯರ್ಥಕ್ಕೆ ಸಹಕರಿಸುವಂತೆ ಎಚ್‌ಎಎಲ್‌ನ  ಆಡಳಿತ ಮಂಡಳಿಗೆ ಸಹ ಕೋರ್ಟ್ ಸೂಚನೆ ನೀಡಿದೆ.

ನೌಕರರ ಮುಷ್ಕರದಿಂದ ಸಂಸ್ಥೆಗೆ ದಿನವೊಂದಕ್ಕೆ ಸರಾಸರಿ  17 ಕೋಟಿ ರೂ. ನಷ್ಟವಾಗುತ್ತಿದ್ದು ಇದನ್ನು ಪ್ರಶ್ನಿಸಿ ಎಚ್‌ಎಎಲ್‌ನ ಆಡಳಿತ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಮುಷ್ಕರವನ್ನು ಕಾನೂನುಬಾಹಿರವೆಂದು ಹೇಳುತ್ತಾ, ರಾಜಿ ಸಂಧಾನ ಪ್ರಕ್ರಿಯೆ ನಡೆಯುತ್ತಿರುವಾಗ ನೌಕರರು ಮುಷ್ಕರವನ್ನು ಮುಂದುವರಿಸಲು ಸಾಧ್ಯವಿಲ್ಲಲ್ಲ ಎಂದು ಆಡಳಿತ ಮಂಡಳಿ ವಾದಿಸಿದೆ.

ನ್ಯಾಯಾಲಯದ ಮಧ್ಯಂತರ ಆದೇಶದ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಎಚ್‌ಎಎಲ್, ಹಿಂದೂಸ್ತಾನ್ ಏರೋನಾಟಿಕ್ಸ್ ನೌಕರರ ಸಂಘ (ಎಚ್‌ಎಇಎ) ಮುಷ್ಕರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.ಒಂದೊಮ್ಮೆ ಕೆಲ್ಸಕ್ಕೆ ಹಾಜರಾಗದಿದ್ದಲ್ಲಿ , ಅದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗಲಿದೆ ಎಂದು ಹೇಳೀದೆ.

SCROLL FOR NEXT