ರಾಜ್ಯ

ರಂಗಭೂಮಿ ಕಲಾವಿದರಿಗೆ ಪವಿತ್ರ ಸ್ಥಳ 'ರಂಗಶಂಕರ'

Nagaraja AB

ಬೆಂಗಳೂರು: ಭಾರತೀಯ ರಂಗಭೂಮಿ ಕಲಾವಿದರಿಗೆ ಪವಿತ್ರ ಸ್ಥಳವಾಗಿರುವ  ರಂಗಶಂಕರ ಇದೇ ತಿಂಗಳ 27 ರಂದು 15 ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರ ಒಡಕಲು ಬಿಂಬ ನಾಟಕ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಈ ನಾಟಕದಲ್ಲಿ ಅರುಂಧತಿ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ. 

2004ರಲ್ಲಿ ನಿರ್ಮಾಣಗೊಂಡ ರಂಗಶಂಕರ ,ಕರಾಟೆ ಕಿಂಗ್ ದಿವಂಗತ ಶಂಕರ್ ನಾಗ್ ನೆನಪಿನಲ್ಲಿ ಅವರ ಪತ್ನಿ ಅರುಂಧತಿ ನಾಗ್  ಅವರಿಂದ ಕಲ್ಪಿತವಾಗಿದ್ದು, ಸಂಕೇತ್ ಟ್ರಸ್ಟ್ ಇದನ್ನು ನಿರ್ವಹಿಸುತ್ತಿದೆ. 15 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ರಂಗಶಂಕರದಲ್ಲಿ ಪ್ರತಿದಿನವೂ ಪ್ರದರ್ಶನ ಇರುತ್ತದೆ. ಪ್ರತಿ ವರ್ಷ  ಸುಮಾರು 440 ಪ್ರದರ್ಶನಗಳು ಕಂಡಿವೆ.

320 ಆಸನದ ವ್ಯವಸ್ಥೆ ಹೊಂದಿರುವ ರಂಗಶಂಕರದಲ್ಲಿ ವಿಶ್ವದರ್ಜೆಯ ಮಟ್ಟದ ಸೌಲಭ್ಯಗಳು ದೊರೆಯುತ್ತವೆ. ವಿಶ್ವದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿನ ರಂಗಭೂಮಿ ಇದಾಗಿದ್ದು, ನಾಟಕಗಳ ಪ್ರದರ್ಶನಕ್ಕೆ  ಕಡಿಮೆ ದರದಲ್ಲಿ ಜಾಗವನ್ನು ನೀಡಲಾಗುತ್ತದೆ

ನಿಗದಿತ ಸಮಯದಲ್ಲಿ ಪ್ರದರ್ಶನ ಆರಂಭವಾಗುತ್ತದೆ. ವಿಳಂಬವಾಗಿ ಬರುವವರೆಗ ಅವಕಾಶ ನೀಡುವುದಿಲ್ಲ. ರಂಗಶಂಕರ ಬೆಂಗಳೂರಿನ ಪ್ರಮುಖ ಕಲೆ ಹಾಗೂ ಸಂಸ್ಕೃತಿಯ ಕೇಂದ್ರವಾಗಿದೆ.

ಜೆಪಿ. ನಗರದ ಆರ್. ಕೆ. ಕಾಲೋನಿಯಲ್ಲಿರುವ ರಂಗಶಂಕರದಲ್ಲಿ ಅಕ್ಟೋಬರ್ 27 ರಂದು ಮಧ್ಯಾಹ್ನ 3-30 ರಿಂದ ಸಂಜೆ 7-30ಕ್ಕೆ ಪ್ರದರ್ಶನ ಆರಂಭವಾಗಲಿದೆ. 

SCROLL FOR NEXT