ರಾಜ್ಯ

ಬೆಂಗಳೂರು: ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿ ಸಾವು ಪ್ರಕರಣಕ್ಕೆ ಟ್ವಿಸ್ಟ್

Shilpa D

ಬೆಂಗಳೂರು: ಅಮೃತಾ ವಿಶ್ವ ವಿದ್ಯಾಪೀಠಂ ಕಾಲೇಜಿನ 7ನೇ ಕಟ್ಟಡದಿಂದ ವಿದ್ಯಾರ್ಥಿ ಹಾರಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಾವನ್ನಪ್ಪಿದ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತುಗೊಳಿಸರಲಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಬಿಟೆಕ್ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ ಶ್ರೀ ಹರ್ಷ ಸೋಮವಾರ ಕಾಲೇಜಿನ 7ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದನು. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು.  

ಜೊತೆಗೆ ಆತ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದ ಜಾಬ್ ಲೆಟರ್ ಅನ್ನು ಕಾಲೇಜು ಆಡಳಿತ ಮಂಡಳಿ ಹರಿದು ಹಾಕಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದೆಲ್ಲಾ ಸುಳ್ಳು ಆರೋಪ ಎಂದಿರು ಕಾಲೇಜು ಮ್ಯಾನೇಜ್ಮೆಂಟ್ ಇದರ ಹಿಂದೆ ಬಾಹ್ಯ ಶಕ್ತಿಗಳ ಕೈವಾಡವಿದೆ ಎಂದು ಹೇಳಿದೆ.

ದುರಂತ ನಡೆಯುವ ಮೊದಲು ಉಂಟಾದ ಬೆಳವಣಿಗೆಗಳನ್ನು ವಿವರಿಸಿದ ಮ್ಯಾನೇಜ್‌ಮೆಂಟ್, ಸೆಪ್ಟೆಂಬರ್ 23 ರಂದು ವಿದ್ಯುತ್ ಸರಬರಾಜಿನಲ್ಲಿ ಅಡ್ಡಿ ಉಂಟಾದ ಕಾರಣ ಒಂದು ಮುಖ್ಯ ಹಾಸ್ಟೆಲ್‌ಗೆ ನೀರು ಸರಬರಾಜಿನಲ್ಲಿ ಅಡಚಣೆಯಾಗಿತ್ತು.  ಹೀಗಾಗಿ ಹಾಸ್ಟೆಲ್ ಪಕ್ಕದ ಬ್ಲಾಕ್‌ಗಳಲ್ಲಿ ನೀರು ಲಭ್ಯವಿತ್ತು ವಿದ್ಯಾರ್ಥಿಗಳು ಅಲ್ಲಿ ನೀರು ಪಡೆಯಬಹುದಿತ್ತು, ಒಂದು ದಿನದಲ್ಲಿ ನೀರಿನ ಸಮಸ್ಯೆ ಬಗೆಹರಿದಿತ್ತು, ಆದರೆ ಕೆಲವು ಕಿಡಿಗೇಡಿಗಳು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಜೊತೆ ಸೇರಿಕೊಂಡು ಪರಿಸ್ಥಿತಿಯ ಲಾಭ ಪಡೆದು, ಕಾಲೇಜು ಕ್ಯಾಂಟಿನ್, ಬಸ್ ಗೆ  ಕಲ್ಲು ತೂರಿದ್ದರು ಎಂದು ಹೇಳಿದೆ.

ಈ ಸಂಬಂಧ 7 ಮಂದಿಯ  ಸಮಿತಿ ರಚಿಸಿ ತನಿಖೆ ನಡೆಸಿ 19 ಮಂದಿಯನ್ನು ಅಮಾನತುಗೊಳಿಸಲಾಗಿತ್ತು,.ಆದರೆ ಈ ಪಟ್ಟಿಯಲ್ಲಿ ಹರ್ಷ ಹೆಸರಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.

SCROLL FOR NEXT