ರಾಜ್ಯ

ಆರ್'ಸಿಇಪಿಯಿಂದ ಡೈರಿ, ಕೃಷಿ ವಲಯ ನಾಶ: ಕಾಂಗ್ರೆಸ್

Manjula VN

ಬೆಂಗಳೂರು: ಭಾರತ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಹೈನೋದ್ಯಮಕ್ಕೆ ಮಾರಕ ಹೊಡೆತ ನೀಡುವ ಸಾಧ್ಯತೆಯುಳ್ಳ ಆಸಿಯಾನ್ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ತರಾತುರಿಯಲ್ಲಿ ಸಹಿ ಹಾಕದಂತೆ ಕಾಂಗ್ರೆಸ್ ಆಗ್ರಹಿಸಿದೆ. 
 
ಆಪಾಯಕಾರಿ ಒಪ್ಪಂದದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ. ರೈತರ ರಕ್ಷಣೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
   
ಯಾವುದೇ ತಯಾರಿ ಇಲ್ಲದೆಯೇ ನೋಟು ನಿಷೇಧ ಹಾಗೂ ಜಿಎಸ್'ಟಿ ಜಾರಿಗೆ ತರಲಾಗಿತ್ತು. ಇದಾದ ಬಳಿಕ ಎಫ್'ಟಿಎ ಮತ್ತೊಂದು ಸಂಕಷ್ಟವಾಗಲಿದೆ. 

2018ರ ನೀತಿ ಆಯೋಗದ ವರದಿ ಪ್ರಕಾರ ಮುಂದಿನ ವರ್ಷಗಳಲ್ಲಿ ಹೈನೋತ್ಪಾದನೆಗೆ ಹೆಚ್ಚಿನ ಬೇಡಿಕೆಗಳು ಬರಲಿದೆ. ಡೈರಿ ಪದಾರ್ಥಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. 

ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಅಥವಾ ಇನ್ನಾವುದೇ ದೇಶಗಳಿಗೆ ಹೋಲಿಕೆ ಮಾಡಿದರೆ, ನಮ್ಮ ದೇಶದ ಕೃಷಿ ಕಾರ್ಮಿಕರು ಹೈನೋತ್ಪಾದನೆ ಮೇಲೆ ಹೆಚ್ಚಿನ ಅವಲಂಬಿತರಾಗಿದ್ದಾರೆಂದು ತಿಳಿಸಿದ್ದಾರೆ. 

SCROLL FOR NEXT