ರಾಜ್ಯ

ಕಾಲ ಬದಲಾಗಿದೆ, ಜಾಮೀನಿನ ಮೇಲೆ ಹೊರಬಂದವರನ್ನ ಸ್ವಾಗತ ಮಾಡೋ ಸಮಾಜವಿದು: ಸಂತೋಷ್ ಹೆಗ್ಡೆ ವಿಷಾದ

Raghavendra Adiga

ಬಳ್ಳಾರಿ: ಹಿಂದೆ ಜೈಲಿಗೆ ಹೋಗಿ ಬಂದವರನ್ನು ಜನರು ತಿರಸ್ಕಾರ ಭಾವದಿಂದ ನೋಡುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾ ದವರಿಗೆ ಸ್ವಾಗತ ಮಾಡುವ ಸಮಾಜದಲ್ಲಿ ನಾವಿದ್ದೇವೆ.ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸಮಾಜಕ್ಕೆ ಮಾರಕ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕ ವ್ಯಕ್ತಿಯನ್ನ ಪೂಜೆ ಮಾಡಿ.ಆದರೆ ಭ್ರಷ್ಟರನ್ನ ಪೂಜೆ ಮಾಡಬಾರದು.ಭ್ರಷ್ಟ ವ್ಯವಸ್ಥೆಯಲ್ಲಿ ನಾವಿದ್ದು,ಸಮಾಜ ಬದಲಾಗಬೇಕಿದೆ.ಜನರಲ್ಲಿ ಬದಲಾವಣೆ ಬರಬೇಕು.ಜನರಲ್ಲಿ ದುರಾಸೆ ಅಧಿಕಾರದ ಆಸೆ ಜಾಸ್ತಿಯಾಗಿದೆ. ದುಡ್ಡಿದ್ದವರು ಅಧಿಕಾರ ಬೇಕು ಎನ್ನುತ್ತಾರೆ. ಅಧಿಕಾರದಲ್ಲಿದ್ದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಭ್ರಷ್ಟಾಚಾರ ಇಂದು ಮಿತಿಮೀರಿ ಬೆಳೆಯುತ್ತಿದೆ. ಹಿಂದೆ ಜೈಲಿ ಹೊದವರನ್ನು ಶಿಕ್ಷೆ ಆಗೋ ಮುಂಚೆಯೇ ಜನರು ಬಹಿಷ್ಕರಿಸುತ್ತಿದರು ಆದರೆ ಈಗ ಸ್ವಾಗತಿಸುತ್ತಿದ್ದಾರೆ. ಏಕ ವ್ಯಕ್ತಿ ಪೂಜೆ ಮಾಡಿ ಆದರೆ ಭ್ರಷ್ಟರನ್ನು ಪೂಜೆ ಮಾಡ ಬಾರದು. ಬಲಿಷ್ಠ ಲೋಕಪಾಲ್​ ಬಿಲ್ ಯಾರಿಗೆ ಬೇಕು, ಅಧಿಕಾರದಲ್ಲಿ ಇರೋರು ಎಷ್ಟು ಪ್ರಮಾಣಿಕರು ಇದ್ದಾರೆ ಎಂದು ಅವರು ಪ್ರಶ್ನಿಸಿದರು.

ರಾಜ್ಯದೆಲ್ಲಿ ಲೋಕಾಯುಕ್ತ ಸಂಸ್ಥೆ ಕೂಡ ದುರ್ಬಲವಾಗಿದೆ,ಎಸಿಬಿ ಪೊಲೀಸ್ ವ್ಯವಸ್ಥೆ ಅಡಿಯಲ್ಲಿ ಬರುವ ಸಂಸ್ಥೆ ಯಾಗಿದೆ.ಮಂತ್ರಿ ಕೆಳಗೆ ಇರುವ ಎಸಿಬಿ ಏನು ಮಾಡಬಹುದು ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿ.ಕೆ ಶಿವಕು ಮಾರ್ ವಿರುದ್ಧ ಸಂತೋಷ್ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

SCROLL FOR NEXT