ರಾಜ್ಯ

5 ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವ ನೂತನ ಜವಳಿ ನೀತಿ ಜಾರಿ

Raghavendra Adiga

ಬೆಂಗಳೂರು: ಜವಳಿ ಉದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಹಾಗೂ ನಿರುದ್ಯೋಗ ನಿವಾರಿಸಲು ರಾಜ್ಯ ಸರ್ಕಾರ ನೂತನ ಜವಳಿ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ನೂತನ ಜವಳಿ ಹಾಗೂ ವಸ್ತ್ರ ನೀತಿ 2019-2024’ಕ್ಕೆ ಸಂಪುಟ ಒಪ್ಪಿಗೆ ನೀಡಿದ್ದು, ಈ ನೀತಿಯಲ್ಲಿ ಮುಂದಿನ ಐದು ವರ್ಷದಲ್ಲಿ 10 ಸಾವಿರ ಕೋಟಿ ಬಂಡವಾಳ ಹೂಡಿಕೆ ಮೂಲಕ ಐದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು

ಜವಳಿ ಉದ್ಯಮವನ್ನು ಅಭಿವೃದ್ಧಿಗೊಳಿಸುವ ಜೊತೆಗೆ ರಾಜ್ಯದ ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಗೊಳಿಸುವ ಯೋಜನೆಯನ್ನು ಈ ನೀತಿಯಲ್ಲಿ ಅಳವಡಿಸಲಾಗಿದೆ. ಅದಕ್ಕಾಗಿ ರಾಜ್ಯವನ್ನು ಹಲವಾರು ವಿಭಾಗಗಳಾವಿ ವಿಂಗಡಿಸಿ ಆದ್ಯತೆ ವಲಯಗಳನ್ನು ಗುರುತಿಸಿದೆ. ಬೆಂಗಳೂರು ಹೊರತುಪಡಿಸಿ ಕಲ್ಯಾಣ ಕರ್ನಾಟಕ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಉದ್ಯಮ ಸ್ಥಾಪಿಸಲು ಪ್ರೋತ್ಸಾಹಿಸುವುದು ಹಾಗೂ ಸೌಲಭ್ಯ ಕಲ್ಪಿಸಿ ಯೋಜನೆ ರೂಪಿಸ ಲಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಇತರೆ ಭಾಗದಲ್ಲಿ ಆರಂಭಿಸುವ ಕೈಗಾರಿಕೆಗಳಿಗೆ ಹೆಚ್ಚು ಸಬ್ಸಿಡಿ ಹಾಗೂ ಇತರೆ ಸೌಲಭ್ಯ ನೀಡಲು ಸರ್ಕಾರ ತೀರ್ಮಾನಿಸಿದೆ.

ಜವಳಿ ಉತ್ತೇಜನಕ್ಕಾಗಿ ರಾಜ್ಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.

* ವಿಭಾಗ-ಎ – ಕಲ್ಯಾಣ ಕರ್ನಾಟಕ

* ವಿಭಾಗ-ಬಿ - ಜಿಲ್ಲಾ ಹಾಗೂ ಪುರಸಭೆಗಳನ್ನು ಹೊರತುಪಡಿಸಿದ ನಗರ

* ವಿಭಾಗ-ಸಿ - ಪುರಸಭೆ ಹಾಗೂ ಜಿಲ್ಲಾಕೇಂದ್ರ

* -ವಿಭಾಗ- ಡಿ - ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ

ಪ್ರಮುಖ ಕ್ಷೇತ್ರಗಳಾದ ನೂಲುವುದು,ದಾರ ತಯಾರಿಕೆ, ನೇಯುವುದು,ಜವಳಿ ಸಂಬಂಧಿಸಿದ ಸಂಯೋಜಿತ ಘಟಕಗಳು,ಗಾರ್ಮೆಂಟ್ಸ್ ,ಪ್ಯಾಕಿಂಗ್ ಹಾಗೂ ಸಾಗಾಣಿಕೆ, ಜವಳಿ ತಂತ್ರಜ್ಞಾನ ಗಳನ್ನು ಅಭಿವೃದ್ಧಿಗೊಳಿಸುವುದು, ಅಳವಡಿಕೆ ಮೂಲಕ ಜವಳಿ ಕ್ಷೇತ್ರಕ್ಕೆ ಬಂಡವಾಳ ಆಕರ್ಷಿಸುವುದಾಗಿದೆ.

ನೂತನ ಜವಳಿ ಹಾಗೂ ವಸ್ತ್ರ ನೀತಿಯಿಂದ ರಾಜ್ಯಕ್ಕೆ 2019-20 ನೇ ಸಾಲಿನಲ್ಲಿ ಅಂದಾಜು 1,000 -50 ಸಾವಿರ ಕೋಟಿ ರೂ ಹೂಡಿಕೆ ಅಂದಾಜಿಸಲಾಗಿದೆ.ಅಂತೆಯೇ 2020-21 1 ನೇ ಸಾಲಿನಲ್ಲಿ 500-75 ಸಾವಿರ ಕೋಟಿ ರೂ,2021-22 ನೇ ಸಾಲಿನಲ್ಲಿ 2,000-1 ಲಕ್ಷ ಕೋಟಿ ರೂ,2022-23ನೇ ಸಾಲಿಗೆ 3,000-1.10 ಲಕ್ಷ ಕೋಟಿ ರೂ 2023-24ನೇ ಸಾಲಿಗೆ 2,500 1.25 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆ ಅಂದಾಜಿಸಲಾಗಿದ್ದು.ಒಟ್ಟು 10 ಸಾವಿರ ಕೋಟಿರೂ ನಿಂದ 1.50 ಲಕ್ಷ ಕೋಟಿ ರೂ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ.ಹಾಗೂ ಇದರಿಂದಾಗಿ ನೇರ ಹಾಗೂ ಪರೋಕ್ಷವಾಗಿ 50 ಸಾವಿರದಿಂದ ರಿಂದ 5 ಲಕ್ಷ ಉದ್ಯೋಗ ಸೃಷ್ಠಿ ಅಂದಾಜಿಸಲಾಗಿದೆ.
 

SCROLL FOR NEXT