ರೈಲಿನಡಿ ಸಿಲುಕಿರುವ ಮಹಿಳೆ 
ರಾಜ್ಯ

ರೈಲಿನಡಿ ಸಿಲುಕಿ  ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಮಹಿಳೆ 

ಮಹಿಳೆಯೊಬ್ಬರು ರೈಲು ಹಳಿ ದಾಟುವಾಗ, ಗೂಡ್ಸ್ ರೈಲು ಬಂದಿದ್ದರಿಂದ  ಹಳಿಯಲ್ಲೇ ಮಲಗಿ ಉಪಾಯದಿಂದ  ಪ್ರಾಣ ರಕ್ಷಿಸಿಕೊಂಡಿರುವ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಇಂದು ನಡೆದಿದೆ.

ಕಲಬುರಗಿ: ಮಹಿಳೆಯೊಬ್ಬರು ರೈಲು ಹಳಿ ದಾಟುವಾಗ, ಗೂಡ್ಸ್ ರೈಲು ಬಂದಿದ್ದರಿಂದ  ಹಳಿಯಲ್ಲೇ ಮಲಗಿ 
ಉಪಾಯದಿಂದ  ಪ್ರಾಣ ರಕ್ಷಿಸಿಕೊಂಡಿರುವ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಇಂದು ನಡೆದಿದೆ.

ಪಟ್ಟಣದ ನಿವಾಸಿ ಮಾನಿಬಾಯಿ ಚಂದರ್ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿರುವ ಮಹಿಳೆ. ರೈಲು ಹಳಿ ದಾಟುವಾಗಿ 
ಏಕಾಏಕಿ ಗೂಡ್ಸ್ ರೈಲು ಆಗಮಿಸಿದೆ. ಆಗ ದಿಕ್ಕು ತೋಚದೆ ತಕ್ಷಣ ಹಳಿಯ ಮಧ್ಯೆ ಮುದುಡಿಕೊಂಡು ಮಲಗಿದ್ದಾರೆ. 
ಇದನ್ನು ನೋಡಿದ ಸಾರ್ವಜನಿಕರು ಗಾಬರಿಗೊಂಡಿದ್ದಾರೆ. 

ಆದರೆ, ರೈಲು ಹೋಗುವವರೆಗೂ ಹಾಗೆಯೇ ಮುದುಡಿಕೊಂಡಿದ್ದ ಮಹಿಳೆ ಎಲ್ಲಾ ಬೋಗಿಗಳು ಚಲಿಸಿದ ಬಳಿಕ ನಿಧಾನವಾಗಿ ಎದ್ದು
ಬಂದಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು  ಆಶ್ಚರ್ಯ ಚಕಿತರಾಗಿದ್ದಾರೆ. ಕೆಲವರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT